ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದಡಿ ಈಗಾಗಲೇ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ವಾಸ್ತು ದೋಷ ನಿವಾರಣಾ ಗುರೂಜಿಯೊಬ್ಬರು ವಾಸ್ತು ದೋಷ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದ್ರಂತೆ.
ಇವ್ರ ಹೆಸರು ಕರುಣಾಕರರೆಡ್ಡಿ ಗುರೂಜಿ. ಇವ್ರು ಚಿತ್ರದುರ್ಗ ಮೂಲದವರು. ಈ ಹಿಂದೆ ವಿನಯ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮ ಮನೆಯ ವಾಸ್ತು ಸರಿಯಿಲ್ಲ. ಅದನ್ನು ಸರಿ ಮಾಡಿಕೊಳ್ಳಿ.
ಇಲ್ಲದೇ ಹೋದರೆ ನಿಮ್ಮನ್ನು ಯಾವ ದೇವರು ಕಾಪಾಡೋಕೆ ಆಗೋದಿಲ್ಲ ಎಂದಿದ್ರಂತೆ. ಈಗ ವಿನಯ್ ಅವರ ಮನೆಗೆ ಭೇಟಿ ನೀಡಿ ವಿನಯ್ ಅವರ ಮನೆಯವರಿಗೆ ವಾಸ್ತು ದೋಷ ಸರಿಪಡಿಸಿಕೊಳ್ಳುವಂತೆ ಹೇಳಿ ಬಂದಿದ್ದು,
ಇದರಿಂದ ವಿನಯ್ ಅವರಿಗೆ ಜಾಮೀನು ಸಿಗಲಿದೆ. ತಡವಾದರೂ ಆರೋಪ ಮುಕ್ತರಾಗಲಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.
Kshetra Samachara
16/12/2020 02:08 pm