ಕುಂದಗೋಳ: ತನ್ನ ತಿಳಿವಳಿಕೆ ಪೂರ್ವದಿಂದಲೇ ತನ್ನೂರು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವುದನ್ನು ಗಮನಿಸಿ ಸ್ವತಃ ಗ್ರಾಮದ ಅಭಿವೃದ್ಧಿಗೆ ಜೈಕಾರ ಹಾಕಲು ಕಡಪಟ್ಟಿ ಗ್ರಾಮಸ್ಥರ ಸಹಕಾರದಿಂದ ಒಂದನೇ ವಾರ್ಡಿನ 'ಅ' ವರ್ಗದ ಅಭ್ಯರ್ಥಿಯಾಗಿ ಕಣಕ್ಕಿಳಿದವರೇ ಈ ಮರಚಪ್ಪ ಬೂದಿಹಾಳ.
ಸ್ವಾಮಿ ನಮ್ಮೂರು ಇಂದಲ್ಲ, ನಿನ್ನೆಯಲ್ಲ. ಕಳೆದ ಐವತ್ತು ವರ್ಷಗಳಿಂದ ಕೊರತೆಗಳ ಸುಳಿಯಲ್ಲಿ ಬಳಲುತ್ತಿದೆ. ಸೂಕ್ತ ರಸ್ತೆ ಇಲ್ಲ, ಚರಂಡಿ ಇಲ್ಲ, ಬಸ್ ನಿಲ್ದಾಣ ವಿಲ್ಲ, ಸಾರ್ವಜನಿಕ ಶೌಚಾಲಯವಿಲ್ಲ, ಸರಿಯಾದ ಬೀದಿದೀಪಗಳಿಲ್ಲ.
ಈ ಬಗ್ಗೆ ಯಾವ ಅಧಿಕಾರಿ, ಜನಪ್ರತಿನಿಧಿಗಳಿಗೆ ಹೇಳಿದ್ರೂ ಪ್ರಯೋಜನವಿಲ್ಲ. ಈ ಕಾರಣದಿಂದ ನಾನೇ ಈ ಬಾರಿ ಗ್ರಾಮದ ಅಭಿವೃದ್ಧಿಗಾಗಿ ಅಖಾಡಕ್ಕೆ ಇಳಿದೆ ಎನ್ನುತ್ತಾರೆ ಮರಚಪ್ಪ ಬೂದಿಹಾಳ.
ಕುಂದಗೋಳ ತಾಲೂಕಿಗೂ ಗುಡೇನಕಟ್ಟಿ ಗ್ರಾಮ ಪಂಚಾಯಿತಿಗೂ ಕಡೆ ಗ್ರಾಮವಾಗೇ ಉಳಿದ ಕಡಪಟ್ಟಿ. ಮಹಿಳೆಯರಿಗೆ ಬಹಿರ್ದೆಸೆ ತಪ್ಪಬೇಕು, ಸಾರ್ವಜನಿಕ ಶೌಚಾಲಯ ನಿರ್ಮಾಣ ವಾಗಬೇಕು,
ಕೃಷಿ ಚಟುವಟಿಕೆಗೆ ಹೊಲಗಳ ರಸ್ತೆ ಡಾಂಬರೀಕರಣ ವಾಗಬೇಕು, ಮನೆ ಮನೆಗೆ ಸರಿಯಾಗಿ ನೀರು ಬರಬೇಕು, ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು, ಶಾಲೆ ಅಭಿವೃದ್ಧಿ ಆಗಬೇಕು, ಕುಡಿಯುವ ಕೆರೆ ಸ್ವಚ್ಛವಾಗಬೇಕು ಎನ್ನುವ ಮರಚಪ್ಪ ಸದಾ ಅಭಿವೃದ್ಧಿಯನ್ನೇ ಜಪಿಸುವ ನಿಮ್ಮೂರ ಮಗ.
ತನ್ನೂರಿನ ಅಭಿವೃದ್ಧಿಗೆ ಸದಾ ಮನೆ ಮನೆಗೆ ತಲುಪಿ ಹಿರಿಯರ ಮಾತನ್ನು ಆಲಿಸಿ ನಿಮ್ಮೂರಿಗೆ ಏನು ಬೇಕು ನೀವೆ ಹೇಳಿ ? ಎಂದು ಯುವಕರು, ಮಹಿಳೆಯರು, ವಿದ್ಯಾವಂತರ ಕೈ ಹಿಡಿದ ಮರಚಪ್ಪ ಬಡವರು, ವಿಧವೆಯರು, ವೃದ್ಧೆಯರು, ಅಂಗವಿಕಲರಿಗೆ ಮಾಸಿಕ ವೇತನ ಜೊತೆ ಮನೆಗಳನ್ನೂ ಕೊಡಬೇಕೆಂಬ ಛಲಗಾರ.
ಮೂಲ ರೈತನ ಮಗನಾದ ಮರಚಪ್ಪ ಕಡಪಟ್ಟಿ, ರೈತರಿಗೂ ಆಧುನಿಕ ಕೃಷಿ ಪದ್ಧತಿ ಪರಿಚಯ ಆಗಬೇಕು, ರೈತರು ಬೆಳೆದ ಬೆಳೆಗಳನ್ನು ತಿನ್ನುವ ಮಂಗಗಳನ್ನು ಅರಣ್ಯ ಇಲಾಖೆ ಸಹಕಾರದಿಂದ ಗ್ರಾಮ ಬಿಡಿಸಬೇಕು,
ಗ್ರಾಮದ ರುದ್ರಭೂಮಿ ಸುತ್ತ ತಂತಿ ಬೇಲಿ ಹಾಕಿ ಚಿತಾಗಾರ ಮಾಡಿಸಬೇಕು, ನಮ್ಮೂರನ್ನು ನೋಡಿದವರು ಅಭಿವೃದ್ಧಿ ಎಂದ್ರೇ ಇದಪ್ಪಾ ಎನ್ನಬೇಕು ಎಂಬ ಸಾವಿರ ಕನಸಿರುವ ಸರದಾರ.
ಕಡಪಟ್ಟಿ ಗ್ರಾಮದ ತಾಯಂದಿರೇ, ಯುವಕರೇ, ಹಿರಿಯರೇ, ನಿಮ್ಮೂರ ಅಭಿವೃದ್ಧಿ ಪರ್ವದ ನೀಲ ನಕಾಶೆ ಹಾಕಿ ಅಧಿಕಾರಕ್ಕಾಗಿ ಕಾಯ್ದು ಕುಳಿತ ಮಣ್ಣಿನ ಮಗ ಮರಚಪ್ಪ ಬೂದಿಹಾಳನಿಗೆ ನಿಮ್ಮ ಆಶೀರ್ವಾದವೇ ಎಂದಿಗೂ ಶ್ರೀರಕ್ಷೆ.
Kshetra Samachara
16/12/2020 10:35 am