ಕುಂದಗೋಳ : ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕಡಪಟ್ಟಿ ಗ್ರಾಮಕ್ಕೆ ತಹಶೀಲ್ದಾರ ಬಸವರಾಜ ಮೆಳವಂಕಿ ಭೇಟಿ ನೀಡಿ ಮತಗಟ್ಟೆಗಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಚುನಾವಣೆಯ ದಿನ ಮತಗಟ್ಟೆ ಸುತ್ತ 100 ಮೀಟರ್ ಪ್ರದೇಶವನ್ನು ಸಾರ್ವಜನಿಕ ವಾಹನ ಸಂಚಾರ ಹಾಗೂ ಪ್ರಚಾರಕ್ಕೆ ನಿಷೇಧ ಮಾಡಬೇಕು, ಕೊರೊನಾ ವೈರಸ್ ಕಾರಣ ಮಾಸ್ಕ್ ಬಳಕೆ ಕಡ್ಡಾಯವಾಗಿ ಮಾಡಿ ಮತ ಚಲಾಯಿಸುವ ಅಭ್ಯರ್ಥಿಗಳ ಕೈಗೆ ಸ್ಯಾನಿಟೈಜರ್ ಸಿಂಪಡಿಸಬೇಕು, ಸಾಮಾಜಿಕ ಅಂತರಕ್ಕೆ ಮನ್ನಣೆ ನೀಡಿ ಮತದಾನಕ್ಕೆ ಅವಕಾಶ ನೀಡಿ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರಿಗೆ ಚುನಾವಣೆ ಪ್ರಕ್ರಿಯೆ ಕಾರ್ಯ ವೈಖರಿ ಜಾಗೃತಿ ಬಗ್ಗೆ ತಿಳಿಸಿ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಮಕ್ಕಳ ಶಾರೀರಿಕ ಬೆಳವಣಿಗೆ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Kshetra Samachara
15/12/2020 05:19 pm