ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಶಿಕ್ಷಕರ ಸಂಘದ ಚುನಾವಣೆ ಸರಳ ಕೋವಿಡ್ ನಿಯಮ ವಿರಳ

ಕುಂದಗೋಳ : ತಾಲೂಕಿನ ಶಿಕ್ಷಕರ ಸಂಘದ ಚುನಾವಣೆ ಪಟ್ಟಣದ ಪುರದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆದಿದೆ. ಈಗಾಗಲೇ ಕುಂದಗೋಳ ತಾಲೂಕಿನ ಎಲ್ಲ ಗ್ರಾಮಗಳ ಶಿಕ್ಷಕರು ಮತದಾನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದರೆ, ಸದ್ಯ 35% ಶಿಕ್ಷಕರು ಮತ ಚಲಾಯಿಸಿದ್ದಾರೆ.

ಈ ಬಾರಿಯ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಒಟ್ಟು 29 ಅಭ್ಯರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 20 ಜನ ಪುರುಷರು 09 ಜನ ಮಹಿಳೆಯರು ಸ್ಪರ್ಧೆಗೆ ಇಳಿದಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದ ಈ ಅಧಿಕೃತ ಚುನಾವಣೆ ಇದಾಗಿದ್ದು ಪ್ರತಿ 5 ವರ್ಷಕ್ಕೊಮ್ಮೆ ಜರುಗುತ್ತಿದ್ದು 2020-25 ಅವಧಿ ಈ ಚುನಾವಣೆ ಹೊಂದಿದೆ.

ಈ ವರ್ಷದ ಚುನಾವಣೆಯಲ್ಲಿ ಕೋವಿಡ್ ಮುಂಜಾಗ್ರತೆಯ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಇಲ್ಲದೆ ಚುನಾವಣೆ ಅಧಿಕಾರಿಗಳು ಮತದಾನ ಪ್ರಕ್ರಿಯೆ ನಡೆಸಿರುವುದು ಶಿಕ್ಷಕರೇ ನಿಯಮ ಮೀರಿದಂತಾಗಿದೆ.

Edited By :
Kshetra Samachara

Kshetra Samachara

15/12/2020 04:38 pm

Cinque Terre

35.71 K

Cinque Terre

1

ಸಂಬಂಧಿತ ಸುದ್ದಿ