ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಚಟಗೇರಿ ಗ್ರಾಮ ಪಂಚಾಯತಿ ಒಂದನೇ ವಾರ್ಡಿನ ಮೂಲಕ ಸಾಮಾಜಿಕ ಸೇವೆಗೆ ಸನ್ನದ್ಧರಾದ ಸಂಜೀವ ಬಂಡಿವಡ್ಡರ

ಹುಬ್ಬಳ್ಳಿ: ಹತ್ತು ಹಲವು ಹೋರಾಟಗಳ ಮೂಲಕ ಸಾರ್ವಜನಿಕ ಸಮಸ್ಯೆಗೆ ಧ್ವನಿಯಾಗಿರುವ ಯುವ ಉತ್ಸಾಹಿ ಸಂಜೀವ ಬಂಡಿವಡ್ಡರ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಗ್ರಾಪಂ ಚುನಾವಣೆಯಲ್ಲಿ ಸಾರ್ವಜನಿಕ ಸೇವೆಗಾಗಿ ಒಂದನೇ ವಾರ್ಡ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಹುಟ್ಟು ಹೋರಾಟಗಾರ, ಅನ್ಯಾಯದ ವಿರುದ್ಧ ಗುಡುಗುವ ಮೂಲಕ ಅಂಚಟಗೇರಿ ಗ್ರಾಮದ ಎಲ್ಲರ ಮನೆಯ ಮಗ ಎಂದೇ ಗುರುತಿಸಿಕೊಂಡಿರುವ ಸಂಜೀವ ಹನುಮಂತಪ್ಪ ಬಂಡಿವಡ್ಡರ ಅಂಚಟಗೇರಿ ಗ್ರಾಮದ ಒಂದನೇ ವಾರ್ಡಿನ ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.

ದಲಿತರ ಪರ ಧ್ವನಿಯಾಗಿ ಭಾರತೀಯ ಭೋವಿ ವಡ್ಡರ ಜನಾಂಗದ ಪರಿಷತ್ ಹುಬ್ಬಳ್ಳಿ ತಾಲೂಕಿನ ಅಧ್ಯಕ್ಷರಾಗಿ ಹಾಗೂ ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಈ ಉತ್ಸಾಹಿ, ಈ ಬಾರಿ ಅಂಚಟಗೇರಿ ಗ್ರಾಮ ಪಂಚಾಯತಿನಲ್ಲಿ ಸ್ಪರ್ಧಿಸುತ್ತಿರುವುದು ಸಾಕಷ್ಟು ಆಶಾಭಾವನೆಗಳಿಗೆ ಸಾಕ್ಷಿಯಾಗಿದೆ.

885 ಮತಗಳಿರುವ ಅಂಚಟಗೇರಿಯ ಮೊದಲ ವಾರ್ಡ್ ನಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿರುವ ಸಂಜೀವ ಬಂಡಿವಡ್ಡರ ಈ ಹಿಂದೆ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಲಾಕ್ ಡೌನ್ ಸಂದರ್ಭ ನೊಂದವರ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಮೂಲಕ ಜನರ ಮನ ಗೆದ್ದಿರುವ ಛಲಗಾರರಾಗಿದ್ದಾರೆ.

ದಿ. ಸಿ.ಎಸ್.ಶಿವಳ್ಳಿಯವರ ಗರಡಿಯಲ್ಲಿ ಪಳಗಿರುವ ಯುವ ಉತ್ಸಾಹಿ ಸಂಜೀವ ಹನುಮಂತಪ್ಪ ಬಂಡಿವಡ್ಡರ ಶಿವಳ್ಳಿಯವರ ಮಾರ್ಗದರ್ಶನದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ.

ಸಮಾಜ ನಮಗೆ ಏನೆಲ್ಲ ಕೊಟ್ಟಿದೆ. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಸದುದ್ದೇಶದಿಂದ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಿಮ್ಮ ಮನೆಯ ಮಗ ಎಂದು ಜನರಲ್ಲಿ ಮತಯಾಚನೆ ಮಾಡಿದ್ದಾರೆ.

ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ನೋಡಿ ಅನುಭವಿಸಿದ ಹೋರಾಟಗಾರ ಸಂಜೀವ ಬಂಡಿವಡ್ಡರ ಅವರು ಈಗಾಗಲೇ ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ವಿಶೇಷವಾಗಿದೆ.

ಇನ್ನು ಮತದಾರ ಪ್ರಭುಗಳು ಆಶೀರ್ವಾದ ಮಾಡಿ ಎಂದು ಅಭ್ಯರ್ಥಿ ಸಂಜೀವ ಬಂಡಿವಡ್ಡರ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

15/12/2020 12:11 pm

Cinque Terre

51.1 K

Cinque Terre

0

ಸಂಬಂಧಿತ ಸುದ್ದಿ