ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ

ಧಾರವಾಡ : ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು, ಸರ್ಕಾರಿ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಹಮ್ಮಿಕೊಂಡ ಮುಷ್ಕರ ಇವತ್ತಿಗೆ ನಾಲ್ಕು ದಿನಕ್ಕೆ ಕಾಲಿಟ್ಟಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ವಾಯುವ್ಯ ಸಾರಿಗೆ ನೌಕರರು ಕರ್ತವ್ಯದಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾದ ಸಾರಿಗೆ ನೌಕರರ ಬಳಿ ನಗರ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ತೆರಳಿ ಹೋರಾಟಕ್ಕೆ ಬೆಂಬಲಿಸದರು. ರಾಜ್ಯ ಸರ್ಕಾರ ಆದಷ್ಟು ಬೇಗ ನೌಕರರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಒತ್ತಾಯಿಸಿದರು.

ಈ ವೇಳೆ ಕೆ.ಪಿ.ಸಿ ಸಿ ಮಾಧ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ ಉಪಸ್ಥಿತರದ್ದರು.

Edited By :
Kshetra Samachara

Kshetra Samachara

14/12/2020 09:56 am

Cinque Terre

30.05 K

Cinque Terre

3

ಸಂಬಂಧಿತ ಸುದ್ದಿ