ನವಲಗುಂದ : ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಬಹುತೇಕ ಎಲ್ಲಾ ಕಡೆಗಳಿಂದಲೂ ವ್ಯಾಪಕ ಬೆಂಬಲ ದೊರಕುತ್ತಿದ್ದು, ನವಲಗುಂದದಲ್ಲಿ ಜೆಡಿಎಸ್ ಪಕ್ಷದ ವತಿಯಿಂದಲೂ ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ದೊರಕಿತು.
ನವಲಗುಂದದ ಬಸ್ ನಿಲ್ದಾಣದಲ್ಲಿ ಅನಿರ್ಧಿಷ್ಟ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರಿಗೆ ಶನಿವಾರ ಜೆಡಿಎಸ್ ಕಾರ್ಯಕರ್ತರು ಅವರೊಂದಿಗೆ ಪ್ರತಿಭಟನೆಗಿಳಿದು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲೇ ಬೇಕು ಎಂದು ಈ ವೇಳೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಇನ್ನೂ ಈ ವೇಳೆ ಪುರಸಭೆಯ ಮಾಜಿ ಅಧ್ಯಕ್ಷ ಜೀವನ್ ಪವಾರ, ದೇವೇಂದ್ರಪ್ಪ ಹಳ್ಳದ ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.
Kshetra Samachara
12/12/2020 07:07 pm