ಹುಬ್ಬಳ್ಳಿ: ಕೇಂದ್ರ ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರ ಪರವಾಗಿದೆ ರೈತರ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದೇವೆ.ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು
ನಗರದಲ್ಲಿಂದು ಮಾತನಾಡಿದ ಅವರು ರೈತ ಮಸೂದೆ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ ಮಾಡುತ್ತಿರುವ ರೈತರ ಜೊತೆ ಮುಕ್ತವಾಗಿ ಚರ್ಚೆ ಮಾಡಿದ್ದೆವೆ,ಕೇಂದ್ರ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ.
ಇನ್ನೂ ಲೋಕಸಭೆಯಲ್ಲಿ ಸ್ಪಷ್ಟವಾದ ಭರವಸೆ ನೀಡಿದ್ದೇವೆ. ಏನಾದರೂ ಡೌಟ್‌ಗಳಿದ್ದರೆ ಅದನ್ನೂ ಬಗೆಹರಿಸಲು ಸಿದ್ಧರಿದ್ದೇವೆ, ಆದ್ದರಿಂದ ರೈತರು ಹೋರಾಟ ಹಿಂಪಡೆಯುವಂತೆ ಮನವಿ ಮಾಡುತ್ತೇನೆ ಎಂದುರು.
ಇದರ ಜೊತೆಗೆ 9 ನೇ ತಾರೀಖು ರೈತರ ಜೊತೆ ಸಭೆಯಿದ್ದುಎಲ್ಲಾ ಸಮಸ್ಯೆಗಳು ಬಗೆಹರಿಯುವ ಭರವಸೆಯಿದೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜೊತೆ ಸೇರಿ ಹಾಳಾದೆ ಎಂದು ಮಾಜಿ ಸಿಎಮ್ ಕುಮಾರಸ್ವಾಮಿ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಅನ್ನೊದು ಭಸ್ಮಾಸುರ ಇದ್ದಂತೆ ಅವರಿಗೆ ಇವಾಗ ಅರ್ಥ ಆಗಿದ್ದು ಸಂತೋಷದ ವಿಚಾರ ಎಂದರು...
Kshetra Samachara
06/12/2020 03:16 pm