ನವಲಗುಂದ : ಕರ್ನಾಟಕ ದಲಿತ ಸಂಘರ್ಷ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ಸಮಿತಿ ವತಿಯಿಂದ ನ್ಯಾಯಮೂರ್ತಿ ಏ ಜೆ ಸದಾಶಿವ ಆಯೋಗದ ವರದಿ ಹಾಗೂ ನ್ಯಾಯಮೂರ್ತಿ ಎಚ್ ಏನ್ ನಾಗಮೋಹನದಾಸ ಹಾಗೂ ನ್ಯಾಯಮೂರ್ತಿ ಕಾಂತರಾಜ್ ಆಯೋಗದ ವರದಿಗಳನ್ನು ಈ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೊಳಿಸಬೇಕೆಂದು ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು..
ಇನ್ನೂ ಈ ಸಂದರ್ಭದಲ್ಲಿ ನವಲಗುಂದ ತಾಲೂಕು ಸಂಚಾಲಕ ನಿಂಗಪ್ಪ ಕೆಳಗೇರಿ ಅಣ್ಣಿಗೇರಿ ತಾಲೂಕು ಸಂಚಾಲಕ ಕುಮಾರ ಸೈದಾಪುರ, ನವಲಗುಂದ ಶಹರ ಸಂಚಾಲಕ ನಿಂಗಪ್ಪ ಜಾಡರ, ಸಂಘಟನಾ ಸಂಚಾಲಕ ಯಲ್ಲಪ್ಪ ಮಾದರ, ಬಸವರಾಜ ಬನ್ನಿಗಿಡದ, ಶರಣಪ್ಪ ಮುಂದಿನಮನಿ, ಶರಣಪ್ಪ ಮಾದರ, ಶಿವರಾಜ ಕಾತರಕಿ ಉಪಸ್ಥಿತರಿದ್ದರು.
Kshetra Samachara
05/12/2020 04:05 pm