ನವಲಗುಂದ : ಮುಖ್ಯಮಂತ್ರಿ ಯಡಿಯುರಪ್ಪನವರು ಮರಾಠ ಸಮಾಜದ ಅಭಿವೃದ್ಧಿಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು ಸ್ವಾಗತಾರ್ಹ ಎಂದು ನವಲಗುಂದ ತಾಲೂಕಿನ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಗೆ ಕೃತಜ್ಞತಾ ಪತ್ರವನ್ನು ಸಲ್ಲಿಸಲಾಯಿತು.
ಇನ್ನೂ ನವಲಗುಂದ ಪಟ್ಟಣದ ಮಲಾಠ ಗಲ್ಲಿಯಿಂದ ಮೆರವಣಿಗೆ ಜಾತಾ ನಡೆಸುತ್ತಾ ತಹಸೀಲ್ದಾರ್ ಕಚೇರಿಯವರೆಗೆ ಬಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಕೃತಜ್ಞತಾ ಪತ್ರವನ್ನು ಮತ್ತು ಮನವಿಯನ್ನು ಸಲ್ಲಿಸಿದರು. ಇನ್ನೂ ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾದವ್, ಜೀವನ್ ಪವಾರ, ವಿಠಲ್ ಜಮಾದರ್, ಕಂಡು ಬಾಬಾರ್ ಸೇರಿದಂತೆ ಮರಾಠ ಸಮುದಾಯದವರು ಉಪಸ್ಥಿತರಿದ್ದರು.
Kshetra Samachara
04/12/2020 05:07 pm