ಧಾರವಾಡ : ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಕರೆ ಹಿನ್ನೆಲೆ ಧಾರವಾಡ ಹಿತರಕ್ಷಣಾ ವೇದಿಕೆಯಿಂದ ಕರ್ನಾಟಕ ಮರಾಠಾ ಸಮುದಾಯ ನಿಗಮ ಬೆಂಬಲಿಸಿ ಜಾಗೃತಿ ನಡೆಸಿದರು.
ನಗರದ ಲೈನ್ ಬಜಾರ್,ಟಿಕಾರೆ ರೋಡ, ವಿವೇಕಾನಂದ ವೃತ, ಸಿ.ಬಿ.ಟಿ, ಸುಭಾಷ್ ರೋಡ ಹಾಗೂ ಗಾಂಧಿ ಚೌಕದಲ್ಲಿ ಕನ್ನಡ ಸಂಘಟನೆಗಳ ' ಬಂದ್ ' ವಿರೋಧಿಸಿ ಕೋವಿಡ್-19 ಲಾಕ್ ಡೌನ್ ನಂತರ ಆರ್ಥಿಕ ಪರಿಸ್ಥಿತಿ ಇಗ ಉತ್ತಮ
ವಾಗುತ್ತಿರುವಾಗ ಮತ್ತೆ ಬಂದ್ ಮಾಡುವುದು ಸರಿಯಲ್ಲಾ ಹಾಗಾಗಿ ವರ್ತಕರಿಗೆ ಅಂಗಡಿ ಬಂದು ಮಾಡವುದುಬೇಡ ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಮೋದ ಕಾರಕೂನ,ಶಶಿ ದೊಡವಾಡ,ಸಂಗಮೇಶ ಬೂದಿಹಾಳ, ಮಂಜುನಾಥ್ ಕಮ್ಮಾರ , ವಿನೋದ ಹನಮರ , ವರುಣ ಕುಲಕರ್ಣಿ ಸೇರಿದಂತೆ ಇತರರು ಅಂಗಡಿಗಳಿಗೆ ಬಂದ್ ಗೆ ಬೆಂಬಲವನ್ನು ನೀಡಬೇಡಿ ಎಂದು ಜಾಗೃತಿ ಮೂಡಿಸಿದ್ದರೆ.
Kshetra Samachara
04/12/2020 10:14 am