ಧಾರವಾಡ: ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಸವಿತಾ ಅಮರಶೆಟ್ಟಿ ಅವರು ಶನಿವಾರ ಧಾರವಾಡದ ಪ್ರತಿಷ್ಟಿತ ಮುರುಘಾಮಠಕ್ಕೆ ಭೇಟಿ ನೀಡಿ ಮೃತ್ಯುಂಜಯಪ್ಪಗಳ ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ದಂಪತಿ ಸಮೇತ ಆಗಮಿಸಿದ ಸವಿತಾ, ಮಲ್ಲಿಕಾರ್ಜುನ ಸ್ವಾಮೀಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು. ನಂತರ ಮೃತ್ಯುಂಜಯಪ್ಪಗಳ ಗದ್ದುಗೆಗೂ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಗೆ ಅಧ್ಯಕ್ಷರಾಗಿರುವ ಸವಿತಾ ಅವರು ಈ ಹಿಂದೆ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
Kshetra Samachara
28/11/2020 03:38 pm