ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಉ.ಬೆಟಗೇರಿ ಅಭಿವೃದ್ಧಿ ಪಥದತ್ತ ಕೊಂಡೊಯ್ದ 'ಮಹಾವೀರ'

ಧಾರವಾಡ: ಗ್ರಾಮ ಪಂಚಾಯ್ತಿಗಳೆಂದರೆ ಒಂದು ಗ್ರಾಮಕ್ಕೆ ಅವುಗಳು ಮಿನಿ ವಿಧಾನಸೌಧಗಳಿದ್ದಂತೆ ಸಾರ್ವಜನಿಕರ ಕೆಲಸಗಳು ಕೈಗೂಡಬೇಕು ಎಂದರೆ ಅವರಿಗೆ ಗ್ರಾಮ ಪಂಚಾಯ್ತಿಗಳ ಸಹಕಾರ ಅಮೂಲ್ಯವಾಗಿರುತ್ತವೆ. ಇನ್ನು ಈ ಪಂಚಾಯ್ತಿಗಳಿಗೆ ಸದಸ್ಯರಾಗಿ ಆಯ್ಕೆಯಾಗಿ ಬರುವ ಸದಸ್ಯರು ತನ್ನ ಗ್ರಾಮ ಅಥವಾ ತನ್ನ ವಾರ್ಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂಬ ಕನಸು ಹೊತ್ತಿರುತ್ತಾರೆ. ಅದೇ ರೀತಿ 2015ರಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಗಾದಿ ಅಲಂಕರಿಸಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ 'ಮಹಾವೀರ' ನ ಕಥೆ ಇದೆ.

ಇವರ ಹೆಸರು ಮಹಾವೀರ ಅಷ್ಟಗಿ. ಇವರದ್ದು ರಾಜಕೀಯ ಮನೆತನ. ಗ್ರಾಮದಲ್ಲಿನ ಸಣ್ಣ ಸಮಸ್ಯೆಗೂ ತಕ್ಷಣವೇ ಸ್ಪಂದಿಸುವ ವ್ಯಕ್ತಿ ಇವರು. ಜಿಲ್ಲಾ ಕೇಂದ್ರ ಧಾರವಾಡದಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿರುವ ಉಪ್ಪಿನ ಬೆಟಗೇರಿ ಗ್ರಾಮ ತಾಲೂಕಿನ ದೊಡ್ಡ ಹಳ್ಳಿಗಳಲ್ಲಿ ಒಂದು. ಇಂತಹ ಗ್ರಾಮದ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ ಅಷ್ಟಗಿ ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ನರೇಗಾ, ಉದ್ಯೋಗ ಖಾತ್ರಿ, ಬಸವ ವಸತಿ ಸೇರಿದಂತೆ ವಿವಿಧ ಯೋಜನೆಗಳಡಿ ಸುಮಾರು 10 ಕೋಟಿಗೂ ಹೆಚ್ಚು ಅನುದಾನ ತಂದು ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿದ್ದಾರೆ. ಕುಡಿಯುವ ನೀರು, ಶಾಲಾ ಕಂಪೌಂಡ್, ಕೊರೊನಾ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯಿಂದ ಕೈಗೊಳ್ಳಲಾದ ಅನೇಕ ಜಾಗೃತಿ ಕಾರ್ಯಕ್ರಮಗಳು, ಗ್ರಾಮದ ಅನೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ, ಸಾರ್ವಜನಿಕ ಬೋರ್ ವೆಲ್ ಗಳ ರಿಚಾರ್ಜ, ಸ್ವಚ್ಛ ಭಾರತ ಆಂದೋಲನದಡಿ ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಹಾವೀರ ಅಷ್ಟಗಿ ಅವರ ನೇತೃತ್ವದಲ್ಲಿ ಎಲ್ಲ ಸದಸ್ಯರು ಮಾಡಿದ್ದು ವಿಶೇಷವಾಗಿದೆ.

ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ಅವರು ಉಪ್ಪಿನ ಬೆಟಗೇರಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಮಹಾವೀರ ಅಷ್ಟಗಿ ಅವರು ಗ್ರಾಮದಲ್ಲಿನ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಗ್ರಾಮಕ್ಕೆ ವಿಶೇಷ ಅನುದಾನವನ್ನೂ ತಂದು ಗ್ರಾಮ ಸುಧಾರಣೆಗೆ ಒತ್ತು ನೀಡಿದ್ದರು. ಅಲ್ಲದೇ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕೂಡ ಮಹಾವೀರ ಅವರ ಕೆಲಸಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರಂತೆ. ಮಹಾವೀರ ಅವರು ಗ್ರಾಮದ ವಾರ್ಡ ನಂಬರ್ 5 ರಿಂದ ಮತ್ತೊಮ್ಮೆ ಸ್ಪರ್ಧೆ ಮಾಡಿ ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯ್ತಿಗೆ ಪುನರಾಯ್ಕೆ ಬಯಸಿದ್ದಾರೆ. ಡಿಜಿಟಲ್ ಗ್ರಾಮ ಮಾಡುವುದು, ಗ್ರಾಮ ಸಭೆಗಳ ಮೂಲಕ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂಬೆಲ್ಲ ಯೋಜನೆಗಳ ಕನಸನ್ನು ಇವರು ಹೊತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಕಂಡ ಕನಸೆಲ್ಲ ನನಸಾಗುವಂತಾಗಲಿ ಇವರ ನೇತೃತ್ವದಲ್ಲಿ ಗ್ರಾಮ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂಬುದೇ ನಮ್ಮ ಹಾರೈಕೆ.

Edited By : Manjunath H D
Kshetra Samachara

Kshetra Samachara

27/11/2020 12:42 pm

Cinque Terre

38.22 K

Cinque Terre

11

ಸಂಬಂಧಿತ ಸುದ್ದಿ