ಹುಬ್ಬಳ್ಳಿ- ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಹುಬ್ಬಳ್ಳಿ ಘಟಕ ಹೋರಾಟ ಸಮಿತಿಯ ವತಿಯಿಂದ, ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ, ಮಹಿಳಾ ಹಕ್ಕುಗಳು ಹಾಗೂ ಯುವಜನರ ನಾಯಕತ್ವದ ಕುರಿತು ಹುಬ್ಬಳ್ಳಿಯ ನೇಕಾರನಗರ ವಾಣಿ ಪ್ಲಾಟ್ ನಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ, ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷರಾದ ತಾರಾದೇವಿ ವಾಲಿ, ಸಿದ್ದು ತೇಜಿ, ಸಂಘಟನಾ ಸಂಚಾಲಕರಾದ ಶೋಭಾ ಕಮತರ, ಸಂಘಟನಾ ಅಧ್ಯಕ್ಷರಾದ ಹೊಂಗೆಮ್ಮ ಜಮಖಂಡಿ, ಯಲ್ಲಪ್ಪ ಸಂಗೇನಹಳ್ಳಿ, ವಿಲಾಸ್ ಗೋಸಾವಿ, ಸರೋಜಾ ಗೋಸಾವಿ, ಕೃಷ್ಣ ಸುಂಕರ್ ಮುಸ್ತಾಕ್ ರೀತಿ ಹಾಗೂ ಇತರರು ಭಾಗವಹಿಸಿದ್ದರು...
Kshetra Samachara
26/11/2020 09:53 pm