ನವಲಗುಂದ : ಸಂವಿಧಾನ ಸಮರ್ಪಣಾ ದಿನಾಚರಣೆಯ ಹಿನ್ನಲೆ ಡಾ. ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ನವಲಗುಂದ ತಾಲೂಕು ವತಿಯಿಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು...
ಇನ್ನೂ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸಮತಾ ಸೈನಿಕ ದಳದ ಉತ್ತರ ಕರ್ನಾಟಕ ಅಧ್ಯಕ್ಷ ಶಂಕರ ಅಜಮನಿ ಚಾಲನೆ ನೀಡಿದರು. ನಂತರ ಕಾರ್ಯಕ್ರಕ್ಕಾಗಮಿಸಿದ ಅತಿಥಿಗಳಿಗೆ ಸಂವಿಧಾನ ಪೀಠಿಕೆ ನೀಡಿ ಸ್ವಾಗತ ಕೋರಿದರು. ಇದೆ ವೇಳೆ ಪಾಲ್ಗೊಂಡ ಎಲ್ಲರೂ ಎದ್ದು ನಿಂತು ಪ್ರಾರ್ಥನಾ ಗೀತೆಯನ್ನು ಹಾಡಿದರು...
Kshetra Samachara
26/11/2020 06:01 pm