ಧಾರವಾಡ: ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾಗಿ ಸವಿತಾ ವಿಶ್ವನಾಥ ಅಮರಶೆಟ್ಟಿ ನಿಯುಕ್ತಿಗೊಂಡಿದ್ದಾರೆ.
ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತೆಯಾಗಿ ಆನೇಕ ವರ್ಷ ಸೇವೆ ಸಲ್ಲಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಗ್ರಾಮೀಣ ಕ್ಷೇತ್ರದಲ್ಲಿ ಇವರ ಹೆಸರು ಬಿಜೆಪಿಯಲ್ಲಿ ಚಾಲ್ತಿಗೆ ಬಂದಿತ್ತು.
ವಿವಿಧ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇವರು 2003 ರಿಂದ ಗ್ರಾಮೀಣ ಪ್ರದೇಶದ ಯುವಜನತೆ ಹಾಗೂ ಮಹಿಳೆಯರನ್ನು ಲಕ್ಷ್ಯದಲ್ಲಿಟ್ಟುಕೊಂಡು ಕಂಪ್ಯೂಟರ್, ಹೊಲಿಗೆ ಹಾಗೂ ಕರಕುಶಲ ತರಬೇತಿ ನೀಡಿ ಅವರನ್ನು ಆರ್ಥಿಕತೆಯಿಂದ ಸ್ವಾವಲಂಬನೆಯಲ್ಲಿ ಬದುಕುವಂತೆ ಮಾಡಲು ಬಹುಮುಖ್ಯ ಪಾತ್ರವಹಿಸಿದ್ದಾರೆ.
2007 ರಲ್ಲಿ ಸುವರ್ಣ ಎಜ್ಯುಕೇಶನಲ್ ಟ್ರಸ್ಟ್ ಹುಟ್ಟು ಹಾಕಿದ ಇವರು, 2011 ರಲ್ಲಿ ಸುವರ್ಣ ಪದವಿ ಕಾಲೇಜು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಅಲ್ಲದೇ 2017 ರಲ್ಲಿ ಸುವರ್ಣ ಬ್ಯಾನಿಯನ್ ಇಂಟರ್ ನ್ಯಾಶನಲ್ ಶಾಲೆ ಸ್ಥಾಪಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ಇವರು ಮಾಡಿದ ಸೇವೆ ಪರಿಗಣಿಸಿ ರಾಜೀವ ಗಾಂಧಿ ಶಿರೋಮಣಿ, ಎಜ್ಯುಕೇಶನ್ ಎಕ್ಸಲೆನ್ಸ್ ಸಹಿತ ವಿವಿಧ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಗೌರವಯುತ ಬದುಕು, ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಇವರಿಗೆ ರಾಜ್ಯ ಮಟ್ಟದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿದ್ದು ಅನೇಕ ರಚನಾತ್ಮಕ ಚಿಂತನೆಗೆ ಮತ್ತಷ್ಟು ವಿಸ್ತ್ರತ ಆವಕಾಶ ದೊರೆತಂತಾಗಿದೆ.
Kshetra Samachara
25/11/2020 05:55 pm