ಕುಂದಗೋಳ : ಪಂಚಮಸಾಲಿ ಸಮಾಜ ಅರ್ಥಿಕ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜ ಸದೃಡಗೊಳಿಸಲು, 2ಎ ವರ್ಗಕ್ಕೆ ಸೇರಿಸಿ ಅಗತ್ಯ ಮೀಸಲಾತಿ ಒದಗಿಸಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಅವರು ಕಲ್ಯಾಣಪುರ ಮಠದ ಸಭಾ ಭವನದಲ್ಲಿ ಪಂಚಮಸಾಲಿ ಸಮಾಜ ತಾಲೂಕು ಘಟಕ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ, ವಿಜಯೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಮುಂದೆ ಹಮ್ಮಿಕೊಂಡಿದ್ದ ಸತ್ಯಾಗ್ರಹ ಹಿಂಪಡೆಯುವಂತೆ ಮುಖ್ಯಮಂತ್ರಿಗಳು ಹೇಳಿದ್ದರು.
ನ.28 ರ ಒಳಗೆ ಮೀಸಲಾತಿ ನೀಡಿದ್ದಾರೆ. ಈ ಮಾತು ಈಡೇರದಿದ್ದಲ್ಲಿ ವಿಧಾನಸೌಧದವರೆಗೆ ಪಾದಾಯಾತ್ರೆ ಮಾಡಿ ಮುತ್ತಿಗೆ ಹಾಕಲಾಗುವುದು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿದೆ. ಈ ಹೋರಾಟವನ್ನು ಪಂಚಮಸಾಲಿ ಸಮಾಜ ನೆನಪಿನಲ್ಲಿಟ್ಟು ಸಮಾಜದ ಏಳಿಗೆಗೆ ಶ್ರಮಿಸಿರಿ ಎಂದರು.
ಬಳಿಕ ಕಲ್ಯಾಣಪುರ ಬಸವಣ್ಣಜ್ಜನವರು, ಶಿವಾನಂದ ಮಠದ ಶ್ರೀಗಳು, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಮಾಜಿ ಪಿ.ಸಿ.ಸಿದ್ಧನಗೌಡರ, ಸಮಾಜದ ತಾಲೂಕು ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
Kshetra Samachara
23/11/2020 04:48 pm