ಕಲಘಟಗಿ:ಸ್ಥಳೀಯ ಒಕ್ಕಲುತನ ಹುಟ್ಟವಳಿ ಮಾರಾಟ ಸೊಸೈಟಿ ಲಿಮಿಟೆಡ್ (ಟಿ ಎ ಪಿ ಸಿ ಎಂ ಎಸ್) ಗೆ ಖಾಲಿಯಾದ ಒಂದು ಸ್ಥಾನಕ್ಕೆ ಜಿ.ಬಸನಕೊಪ್ಪ ಗ್ರಾಮದ ಪಿಕೆಪಿಎಸ್ ನಿಂದ ಮುಖಂಡರಾದ ವಜ್ರಕುಮಾರ ಮಾದನಬಾವಿ ಬಹುಮತದಿಂದ ಆಯ್ಕೆಯಾದರು.
ಟಿ ಎ ಪಿ ಸಿ ಎಂ ಎಸ್ ಗೆ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನಗೊಂಡ ಮುಕ್ಕಲ್ ಗ್ರಾಮದ ನೀಲಕಂಠಗೌಡ ಪಾಟೀಲ ಹಾಗೂ ವಜ್ರಕುಮಾರ ಮಾದನಬಾವಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಕಲ್ಲಪ್ಪ ಅರಶಿಣಗೇರಿ,ಉಪಾಧ್ಯಕ್ಷೆ ಗಿರಿಜಾ ಜಿನ್ನೂರ,ವಿ ಎಸ್ ಪಾಟೀಲ,ಶಶಿಧರ ಹುಲಿಕಟ್ಟಿ,ಶಂಕ್ರಣ್ಣ ರಾಯನಾಳ,ನಿಂಗಪ್ಪ ಸುತಗಟ್ಟಿ,ಶಿವಣ್ಣ ನೀರಲಕಟ್ಟಿ,ಬಸವರಾಜ ಶೆರೆವಾಡ,ಬಸವರಾಜ ತಿಪ್ಪಣ್ಣವರ ಉಪಸ್ಥಿತರಿದ್ದರು.
Kshetra Samachara
23/11/2020 02:33 pm