ಧಾರವಾಡ: ಯೋಗಿಶಗೌಡ ಗೌಡರ ಕೊಲೆ ಪ್ರಕರಣ ಸುಪ್ರೀಂಕೋರ್ಟನಲ್ಲಿ ಡಿಸಮಿಸ್ ಆಗಿತ್ತು. ಅದನ್ನು ಮತ್ತೇ ರೀ ಓಪನ್ ಮಾಡಿಸಿ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿ, ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿನಯ್ ಅವರ ಹಾಗೂ ನನ್ನ ಸಂಬಂಧ ಬಹಳ ಹಿಂದಿನದು. ಅವರಿಗೆ ಈಗ ಈ ಸಂಕಷ್ಟ ಎದುರಾಗಿದೆ. ಈ ಎಲ್ಲ ಪ್ರಕರಣಗಳಿಂದ ಅವರು ಹೊರಗಡೆ ಬರುತ್ತಾರೆ. ಹೊರಗಡೆ ಬಂದು ಇನ್ನೂ ಶಕ್ತಿಶಾಲಿಯಾಗಿ ಬೆಳೆಯುತ್ತಾರೆ ಎಂದರು.
ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ ಎಂದು ವಿನಯ್ ಅನೇಕ ಬಾರಿ ಹೇಳಿದ್ದಾರೆ. ಈ ಬಗ್ಗೆ ಕಾನೂನು ಸಮರ ಆಗುತ್ತದೆ. ಅವರು ನಿರಪರಾಧಿಯಾಗಿ ಹೊರಗಡೆ ಬರುತ್ತಾರೆ. ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅಧಿಕಾರ ಶಾಶ್ವತವಲ್ಲ ಎಂದರು.
Kshetra Samachara
20/11/2020 06:43 pm