ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಡರಸಿಂಗಿ ಗೋಶಾಲೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ

ಹುಬ್ಬಳ್ಳಿ :ಬುಡರಸಿಂಗಿ ಶಾಂತಿನಾಥ ಟ್ರಸ್ಟ್ ವತಿಯಿಂದ ನಿರ್ವಹಣೆ ಮಾಡುತ್ತಿರುವ ಗೋಶಾಲೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದು ಜೈನ ಸಮುದಾಯದ ಬಾಂಧವರು ಅತ್ಯಂತ ಶ್ರದ್ದಾ ಭಕ್ತಿಯಿಂದ ಗೋವುಗಳನ್ನು ಇಲ್ಲಿ ಆರೈಕೆ ಮಾಡುತ್ತಿರುವುದನ್ನು ಕಂಡು ಸಂತೋಷವಾಗಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಸಂತಸ ವ್ಯಕ್ತ

ಪಡಿಸಿದರು

ಸುಮಾರು 190 ಕ್ಕೂ ಹೆಚ್ಚು ಗೋವುಗಳು ಇಲ್ಲಿ ಆಶ್ರಯ ಪಡೆದಿವೆ. ಗೋವು ಪ್ರಿಯರು ಹುಟ್ಟುಹಬ್ಬ ಹಾಗೂ ತಮ್ಮ ಜೀವನದ ವಿಶೇಷ ದಿನವನ್ನು ಇಲ್ಲಿ ಗೋವುಗಳ ಜೊತೆಯಲ್ಲಿ ಆಚರಿಸಕೊಳ್ಳುವುದು ವಿಶೇಷ. ಮುಂದಿನ ದಿನಗಳಲ್ಲಿ ಗೋಶಾಲೆ ಅಭಿವೃದ್ಧಿ ದೃಷ್ಟಿಯಿಂದ ಅನುದಾನ ನೀಡುವುದಾಗಿ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

19/11/2020 08:04 pm

Cinque Terre

24.53 K

Cinque Terre

0

ಸಂಬಂಧಿತ ಸುದ್ದಿ