ಹುಬ್ಬಳ್ಳಿ- ಕಾಲೇಜುಗಳು ಇಂದಷ್ಟೆ ಪ್ರಾರಂಭ ಆಗಿರುವುದರಿಂದ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಹಂತಹಂತವಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ, ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು..
ನಗರದಲ್ಲಿಂದು ಮಾಧ್ಯಮ ಮೂಲಕ ಮಾತನಾಡಿದ ಅವರು, ಕಾಲೇಜು ಆರಂಭಕ್ಕೆ ರಾಜ್ಯ ಸರಕಾರ ಅನುಮತಿ ನೀಡಿರುವ ಹಿನ್ನೆಲೆ, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಕಾಲೇಜು ಆಡಳಿತ ಮಂಡಳಿ ಆರಂಬಿಸಿವೆ. ಹಂತಹಂತವಾಗಿ ವಿಧ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸುತ್ತಾರೆ ಎಂದರು. ಇನ್ನೂ ಕೆಜೆಹಳ್ಳಿ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮಾತನಾಡಿ ಡಿಜೆಹಳ್ಳಿ ಗಲಭೆ ಪ್ರಕರಣದ ತನಿಖೆ ನಡೆಯುತ್ತಿದೆ. ಮಾಜಿ ಮೇಯರ್ ಸಂಪತ್‌ರಾಜ್ ತಲೆ ಮರೆಸಿಕೊಂಡಿದ್ದು ಬಂಧನದ ಅನಿವಾರ್ಯತೆಯಿತ್ತು. ಈಗ ಸಂಪತ್‌ರಾಜ್ ಬಂಧನವಾಗಿದ್ದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆಗೆ ಕಾರಣರಾದವರಿಗೆ ಕಾನೂನು ವ್ಯಾಪ್ತಿಯಲ್ಲಿ ಕ್ರಮವಾಗುತ್ತೆ ಎಂದುರು. ಸಚಿವ ಸಂಪುಟ ವಿಸ್ತರಣೆ ಪುನಾರಚನೆ ಸಿಎಮ್ ವಿವೇಚನೆಗೆ ಬಿಟ್ಟದ್ದು ,ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡುತ್ತಾರೆ.ನಮ್ಮ ಸರ್ಕಾರ ಬಂದನಂತರ ಇದುವರೆಗೂ ಎಲ್ಲಾ ಸುಲಲಿತವಾಗಿ ನಡೆದಿದೆ.ಉಪ ಚುನಾವಣೆ ಗೆದ್ದಿದ್ದೇವೆ, ಸಂಪುಟ ರಚನೆಯೂ ಸುಗಮವಾಗಿ ಆಗುತ್ತೆ.ಯಾರಿಗೆ ಏನು ಜವಾಬ್ದಾರಿ ಕೊಡಬೇಕೆಂದು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ, ಎಂದು ಅವರು ಹೇಳಿದರು.
Kshetra Samachara
17/11/2020 11:54 am