ಹುಬ್ಬಳ್ಳಿ: ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ.ಇವತ್ತು ನಮ್ಮ ಸರ್ಕಾರದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ.
ಯಾರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಮುಖ್ಯಮಂತ್ರಿಗಳು ಮತ್ತು ಪಕ್ಷದ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಮುರಗೇಶ ನಿರಾಣಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,ಸಚಿವ ಸ್ಥಾನ ಸಿಕ್ಕರೆ ಸಂತೋಷ, ಸಿಗದೆ ಇದ್ದರೆ ಯಾರು ಸಚಿವರಾಗುತ್ತಾರೋ ಅವರಿಗೆ ಸಹಕಾರ ಕೋಡುತ್ತೆನೆ. ಸಚಿವ ಸ್ಥಾನ ಕೊಡದೆ ಇದ್ದರೆ ನನಗೆ ಯಾವುದೇ ಬೇಸರವಿಲ್ಲ ಎಂದರು.
ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ ಅವರ ವ್ಯಯಕ್ತಿಕ ವಿಚಾರ ಅದರ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ವಿನಯ್ ಕುಲಕರ್ಣಿ ಜೈಲಿನಿಂದ ಬಂದ ನಂತರ ಪಂಚಮಸಾಲಿ ಸಮಾವೇಶ ಮಾಡಲು ಹೊರಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಅದು ಅವರ ವ್ಯಯಕ್ತಿಕ ವಿಚಾರಗಳು, ಅವರು ಇನ್ನೂ ಒಳಗಡೆ ಇದ್ದಾರೆ ಎಂದರು.
Kshetra Samachara
13/11/2020 03:43 pm