ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ನಿರಪರಾಧಿಯಾಗಿ ಹೊರ ಬಂದರೆ ನಮಗೂ ಖುಷಿ ಇದೆ ಎಂದ ಬಿಜೆಪಿ ಮುಖಂಡ

ಧಾರವಾಡ: ವಿನಯ್ ಕುಲಕರ್ಣಿ ಅವರು ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ನಿರಪರಾಧಿಯಾಗಿ ಹೊರಗಡೆ ಬಂದರೆ ನಮಗೂ ಖುಷಿ ಇದೆ ಎಂದು ಬಿಜೆಪಿ ಮುಖಂಡ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ವಿನಯ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭದಲ್ಲಿ ವಿನಯ್ ಅವರನ್ನು ಜೈಲಿಗೆ ಕಳಿಸುವ ಹಿಂದೆ ಬಿಜೆಪಿ ಹಾಗೂ ಆರ್ ಎಸ್ಎಸ್ ಕೈವಾಡ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಬಿಜೆಪಿ ಹಾಗೂ ಆರ್ ಎಸ್ಎಸ್ ಪಾತ್ರ ಏನೂ ಇಲ್ಲ. ಕೂಡಲೇ ಹರಿಪ್ರಸಾದ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಅಂಚಟಗೇರಿ ಆಗ್ರಹಿಸಿದರು.

ಇನ್ನು ಮಠಾಧೀಶರು ಜೈಲಿಗೆ ಹೋದವರ ಬಗ್ಗೆ ಮಾತ್ರ ಕರುಣೆ ತೋರಿಸುವ ಕೆಲಸ ಮಾಡಬಾರದು. ಹತ್ಯೆಗೀಡಾದ ತಮ್ಮ ಸಮುದಾಯದ ವ್ಯಕ್ತಿಯ ಮನೆಗೂ ಹೋಗಿ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದರು.

Edited By : Manjunath H D
Kshetra Samachara

Kshetra Samachara

12/11/2020 01:46 pm

Cinque Terre

55.78 K

Cinque Terre

7

ಸಂಬಂಧಿತ ಸುದ್ದಿ