ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ಹೊಸ ಹುಮ್ಮಸ್ಸಿನಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನರೇಂದ್ರ ಮೋದಿ ಅವರ ಜನಪ್ರಿಯತೆ ಎಲ್ಲೂ ಕಡಿಮೆಯಾಗಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರು ಮೋದಿ ಅಲೆ ಎಲ್ಲಿದೆ? ಎಂದಿದ್ದರು. ಇಡೀ ದೇಶದ ತುಂಬೆಲ್ಲ ಮೋದಿ ಹವಾ ಇರೋದು ಅವರಿಗೆ ಗೊತ್ತೇ ಇಲ್ಲ. ಆದ್ರೆ ಮೋದಿ ಹವಾ ಎಲ್ಲಿದೆ ಅನ್ನೋದು ಈಗ ಸಿದ್ದರಾಮಯ್ಯನವರಿಗೆ ಗೊತ್ತಾಗಿರಬಹುದು ಎಂದು ಜೋಶಿ ಕುಟುಕಿದ್ದಾರೆ.
ಮೋದಿ ಜನಪ್ರಿಯತೆ ಎಲ್ಲಿಯೂ ಕಡಿಮೆಯಾಗಿಲ್ಲ. ಪಕ್ಷದ ಅಸ್ತಿತ್ವ ಕಡಿಮೆ ಇರುವ ತೆಲಂಗಾಣದಲ್ಲೂ ನಮಗೆ ಜಯ ಸಿಕ್ಕಿದೆ. ಮುಂದೆ ಪಶ್ಚಿಮ ಬಂಗಾಳದಲ್ಲೂ ನಾವು ಗೆಲ್ಲಲಿದ್ದೇವೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
Kshetra Samachara
11/11/2020 08:43 am