ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತದಾರರ ಬಿಜೆಪಿ ಮೇಲೆ ನಂಬಿಕೆ ಇಟ್ಟು ಮತ ಹಾಕಿದ್ದಾರೆ: ಶೆಟ್ಟರ್ ಮಾತು

ಹುಬ್ಬಳ್ಳಿ: ಶಿರಾ ಮತ್ತು ಆರ್.ಆರ್.‌ನಗರದ ಕ್ಷೇತ್ರದ ಜನ ನಮ್ಮನ್ನ ಕೈಹಿಡಿದಿದ್ದಾರೆ.ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಕರ್ನಾಟಕದ ಜನತೆ ಆಶೀರ್ವಾದ ಬಿಜೆಪಿಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಬಿಹಾರದ ಚುನಾವಣೆ ಸಿ ವೋಟರ್ ಸಮೀಕ್ಷೆ ಮಹಾಘಟಬಂಧನ ಎಂದಿತ್ತು, ಅದು ಸುಳ್ಳಾಗಿದೆ.ಬಿಹಾರದ ಜನತೆ ಮೋದಿಯವರ ಮೇಲೆ ಇರುವ ವಿಶ್ವಾವನ್ನ ವ್ಯಕ್ತಪಡಿಸಿದ್ದಾರೆ ಎಂದರು.

ನಿತೇಶ್‌ಕುಮಾರ ಅವರ ಜೊತೆ ನಾವಿದ್ದೇವೆಂದು ತೋರಿಸಿಕೊಟ್ಟಿದ್ದಾರೆ.ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದೆ.ಕಾಂಗ್ರೇಸ್ ಅಧೋಗತಿಗೆ ಹೋಗ್ತಾ ಇದೆ ಎಂದ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಕಾಂಗ್ರೆಸ್ಸನ್ನು ಉದ್ದಾರ ಮಾಡಲಿಕ್ಕೆ ಆಗುವುದಿಲ್ಲ ಎಂದು ಲೇವಡಿ ಮಾಡಿದರು.

ಕನಕಪುರದ ಬಂಡೆಗೂ ಉಪ ಚುನಾವಣೆಯಲ್ಲಿ ಏನೂ ಮಾಡಲಿಕ್ಕೆ ಆಗಲಿಲ್ಲ.ಬಿಜೆಪಿ ಬಹಳಷ್ಟು ಬಲಾಡ್ಯವಾಗಿ ಬೆಳೆದಿದೆ.ಬಿಜೆಪಿಗೆ ಮೈಸೂರು ಭಾಗದಲ್ಲಿ ನಮಗೆ ಬೇಸ್ ಇರಲಿಲ್ಲ ಈಗ ನಮ್ಮ ಪಕ್ಷ ಅಲ್ಲಿಯೂ ಸ್ಟ್ರಾಂಗ್ ಆಗುತ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ಮುರಾಬಟ್ಟೆ ಆಗುತ್ತಿದೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

10/11/2020 05:01 pm

Cinque Terre

41.24 K

Cinque Terre

8

ಸಂಬಂಧಿತ ಸುದ್ದಿ