ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪಶ್ಚಿಮ ಪದವೀಧರರ ಚುನಾವಣೆ: ಮೊದಲ ಸುತ್ತಿನ ಮಾಹಿತಿ ಇಲ್ಲಿದೆ ನೋಡಿ

ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣಾ ಮತ ಎಣಿಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ.

ಈ ಚುನಾವಣೆಯಲ್ಲಿ ಒಟ್ಟು 52068 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೊದಲ ಸುತ್ತಿನಲ್ಲೇ 2445 ಮತಗಳು ಅಸಿಂಧುವಾಗಿದ್ದು, 11552 ಮತಗಳು ಸಿಂಧುವಾಗಿವೆ.

ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು 6777 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ಅವರು 2928 ಮತಗಳನ್ನು ಪಡೆದಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದ ಬಸವರಾಜ ಗುರಿಕಾರ ಅವರು 1672 ಮತಗಳನ್ನು ಪಡೆದಿದ್ದಾರೆ.

ಶಿವಶಂಕರ ಕಲ್ಲೂರ ಅವರಿಗೆ 27, ಶಿವರಾಜ ಕಾಂಬಳೆ ಅವರಿಗೆ 12, ಸೋಮಶೇಖರ ಉಮರಾಣಿ ಅವರಿಗೆ 19, ದಶರಥ ರಂಗರೆಡ್ಡಿ 3, ಬಿ.ಡಿ.ಹಿರೇಗೌಡರ ಅವರಿಗೆ 28, ಬಸವರಾಜ ತೇರದಾಳ ಅವರಿಗೆ 6 ಮತಗಳು ಲಭಿಸಿವೆ. ಮೊದಲ ಸುತ್ತಿನಲ್ಲಿ 13997 ಮತಗಳು ಎಣಿಕೆಯಾಗಿವೆ.

Edited By : Manjunath H D
Kshetra Samachara

Kshetra Samachara

10/11/2020 04:56 pm

Cinque Terre

25.65 K

Cinque Terre

0

ಸಂಬಂಧಿತ ಸುದ್ದಿ