ಕಲಘಟಗಿ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸದಾಶಿವ ಆಯೋಗದ ವರದಿ ಜಾರಿಗೆ ತರಲು ಸಿದ್ಧ ಎಂಬ ಹೇಳಿಕೆಯನ್ನು ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ನೀಡಿದ್ದು,ಸಮಾಜ ಒಡೆಯುವ ಕೆಲಸ ಮಾಡಿದ ಕಟೀಲ್ ಹೇಳಿಕೆಯನ್ನು ಬಂಜಾರಾ ಭೋವಿ, ಕೊರಮ,ಕೋರಚ ಸಮಾಜಗಳು ತೀವ್ರವಾಗಿ ವಿರೋಧ ವ್ಯಕ್ತ ಪಡಿಸುತ್ತವೆ ಎಂದು
ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.
ಅವರು ತಾಲೂಕಿನ ಬಿ. ಶಿಗಿಗಟ್ಟಿ ತಾಂಡಾದಲ್ಲಿ ಗೋರ ಸೇನಾ ಸಾಮಾಜಿಕ ಚಳುವಳಿ ಹಾಗೂ ಶ್ರೀ ಸೇವಾಲಾಲ್ ಬಂಜಾರಾ ಸಮಿತಿಯಿಂದ ಎಸ್ ಎಸ್ ಏಲ್ ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅರುಣ ಚವ್ಹಾಣ,ವಾಸು ಲಮಾಣಿ,ಪ್ರಕಾಶ ಲಮಾಣಿ,ಬಾಲು ಚವ್ಹಾಣ,ಪ್ರೆಮಸಿಂಗ್ ರಾಠೊಡ್,ಎನ್ ಟಿ ಪೂಜಾರ,ನೀಲು ರಾಠೊಡ,ಕೃಷ್ಣ ಚವ್ಹಾಣ, ರಮೇಶ ಲಮಾಣಿ,ಮಾಂತೇಶ ಲಮಾಣಿ,ಪಾಂಡು ಚವ್ಹಾಣ,ಮಂಗಲಪ್ಪ ಲಮಾಣಿ ಹಾಗೂ ತಾಂಡಗಳ ನಾಯಕ್ ಡಾವ್ ಕಾರಭಾರಿ ಪಾಲ್ಗೊಂಡಿದ್ದರು.
Kshetra Samachara
07/11/2020 09:43 pm