ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿನಯ್ ಕುಲಕರ್ಣಿ ಬೆನ್ನಿಗೆ ನಿಂತ ಸುರ್ಜೇವಾಲ

ಬೆಂಗಳೂರು- ಕೊಲೆ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಿಂತಿದ್ದಾರೆ‌.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಬಿಜೆಪಿ ಸರ್ಕಾರ ಸಿಬಿಐ ಅನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ‌ ಎ‌ಂದು ನೇರ ಆರೋಪ ಮಾಡಿದ್ದಾರೆ. ಅಸ್ಥಿರ ಯಡಿಯೂರಪ್ಪ ಸರ್ಕಾರವು ತನ್ನ ಮುಂಚೂಣಿ ಘಟಕಗಳಾದ ಇಡಿ, ಸಿಬಿಐಗಳನ್ನು ಬಳಸಿಕೊಂಡು ನಮ್ಮ‌ ಪಕ್ಷದ ಡಿ ಕೆ ಶಿವಕುಮಾರ್, ಜಿ ಪರಮೇಶ್ವರ್, ವಿನಯ್ ಕುಲಕರ್ಣಿ, ಸೇರಿದಂತೆ ಇನ್ನಿತರ ಕಾಂಗ್ರೆಸ್ ನಾಯಕರನ್ನು ಹಣಿಯುವ ಪ್ರಯತ್ನ ನಡೆದಿದೆ. ಈ ತಂತ್ರಗಳು ಜನರಿಗಾಗಿ ಹೋರಾಡುತ್ತಿರುವ ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಸರ್ಜೇವಾಲ ಟ್ವೀಟ್ ಮೂಲಕ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

07/11/2020 05:55 pm

Cinque Terre

49.13 K

Cinque Terre

7

ಸಂಬಂಧಿತ ಸುದ್ದಿ