ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುರುಬರನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಿ- ಮಾಜಿ ಸಂಸದ ವಿರೂಪಾಕ್ಷಪ್ಪ ಒತ್ತಾಯ

ಹುಬ್ಬಳ್ಳಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ, ಜನೇವರಿ 15ರಿಂದ ಫೆಬ್ರುವರಿ 7ರವರೆಗೆ ಪಾದಯಾತ್ರೆ ಮೂಲಕ ಕಾಗಿನೆಲೆಯಿಂದ ಬೆಂಗಳೂರಿಗೆ, ಕನಕ ಗುರುಪೀಠದ ಗುರುಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಮಾಜಿ ಸಂಸದ ಕೆ.ವಿ. ವಿರೂಪಾಕ್ಷಪ್ಪ ಹೇಳಿದರು...

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಅತ್ಯಂತ ಪುರಾತನ ಮೂಲ ನಿವಾಸಿಗಳು, ಅರೆನಾಗರಿಕ ಬುಡಕಟ್ಟು ಜನಾಂಗದವರೆಂದು ನಮ್ಮನ್ನು ಬ್ರಿಟಿಷರು ದಾಖಲೆಗಳಲ್ಲಿ ದಾಖಲಿಸಿದ್ದಾರೆ,ಇತ್ತೀಚೆಗೆ ಕುರುಬ ಜಾತಿಯ ಕೆಲವು ಉಪಪಂಗಡಗಳುಪರಿಶಿಷ್ಟ ಜಾತಿಗೆ ಸೇರಿ ಸೌಲಭ್ಯಗಳನ್ನು ಪಡೆಯುತ್ತಿವೆ. ಇದು ಮೂಲ ಕುರುಬ ಜನಾಂಗದವರಿಗೆ ನಲಮಾಡುತ್ತಿರುವ ಅನ್ಯಾಯ ಕುರುಬ, ಗೊಂಡ, ಕಾಡು ಕುರುಬ, ಜೇನು ಕುರುಬ, ಕುರುಂಬನ್‌ ಮತ್ತು ಕಟ್ಟುನಾಯಕನ್‌ ಮೂಲ ಜಾತಿಗಳನ್ನು ಕೊಡಗು ಜಿಲ್ಲೆಯಲ್ಲಿ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೀಮಿತ, ಆಕ್ರೋಶನ. 19ರಂದು ಸಮಾಜದ ಮುಖಂಡರ, ಮಠಾಧೀಶರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಜ. 15ರಂದು ರಾಜ್ಯದ ಎಲ್ಲ ಕುರುಬ ಸಮುದಾಯದ ಮುಖಂಡರ, ಜನಪ್ರತಿನಿಧಿಗಳ ಹಾಗೂ ಗುರುಗಳ ನೇತೃತ್ವದಲ್ಲಿ ಬೆಂಗಳೂರು ಪಾದಯಾತ್ರೆ, ಫೆ. 7ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ, 10 ಲಕ್ಷ ಜನ ಸೇರುವ ನಿರೀಕ್ಷೆ ಎಂದರು.

Edited By : Manjunath H D
Kshetra Samachara

Kshetra Samachara

07/11/2020 05:22 pm

Cinque Terre

37.85 K

Cinque Terre

0

ಸಂಬಂಧಿತ ಸುದ್ದಿ