ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕಾವಿ ಬಟ್ಟೆ ಹಾಕಿರುವ ನೀವು ಒಂದು ಜಾತಿಗೆ ಸೀಮಿತವಲ್ಲ'

ಬೆಳಗಾವಿ: ಕಾವಿ ಬಟ್ಟೆ ಹಾಕಿರುವ ನೀವು ಒಂದು ಜಾತಿಗೆ ಸೀಮಿತವಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪಂಚಮಸಾಲಿ ಮಠದ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಗುಡುಗಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಂಧವನ್ನು ಜಯಮೃತ್ಯುಂಜಯ ಶ್ರೀಗಳು ಖಂಡಿಸಿದ್ದರು. ಇದೇ ವಿಚಾರವಾಗಿ ನಗರದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಕೊಲೆ ಆರೋಪದಲ್ಲಿ ಜೈಲಿಗೆ ಹೋದರೆ ಅವರು ನಮ್ಮವರು ಎನ್ನುವುದು ಸರಿಯಲ್ಲ. ಕಾನೂನು ಪ್ರಕಾರ ಅಪರಾಧಿ, ನಿರಪರಾಧಿ ಅನ್ನುವುದು ಸಾಬೀತಾಗಬೇಕು. ಪ್ರಾರಂಭದಲ್ಲಿ ಆರೋಪಿಗಳು ನಮ್ಮವರು ಎನ್ನುವುದು ಅನೈತಿಕತೆ ಎಂದು ಹೇಳಿದ್ದಾರೆ.

ಬಂಧನವಾದ ಕೂಡಲೇ ಬೆಂಬಲ ಕೊಡುವುದರಿಂದ ತಪ್ಪು ಸಂದೇಶ ರವಾನೆ ಆಗುತ್ತದೆ. ಆಧಾರ ಇರುವ ಕಾರಣ ಸಂಶಯದಿಂದ ವಿನಯ್ ಕುಲಕರ್ಣಿ ಬಂಧಿಸಿದ್ದಾರೆ. ವಿನಯ್ ಕುಲಕರ್ಣಿ ಅವರ ಪರವಾಗಿ ನಿಂತಿದ್ದು, ನಿಮ್ಮ ಮಠದ ಶೋಭೆ ಅಲ್ಲ ಎಂದು ಕಿಡಿಕಾರಿದ್ದಾರೆ.

Edited By : Vijay Kumar
Kshetra Samachara

Kshetra Samachara

06/11/2020 07:07 pm

Cinque Terre

51.56 K

Cinque Terre

20

ಸಂಬಂಧಿತ ಸುದ್ದಿ