ಕುಂದಗೋಳ : ಬಹು ಕುತೂಹಲ ಕೆರಳಿಸಿದ್ದ ಕುಂದಗೋಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದ ಚುನಾವಣೆ ಇಂದು ಮುಕ್ತಾಯ ಕಂಡಿದ್ದು ಈ ಹಿಂದೆ ನಡೆದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ತೀವ್ರ ಪೈಪೋಟಿಯ ನಡುವೆ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ವಾಗೀಶ್ ಗಂಗಾಯಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನವನ್ನು ಭುವನೇಶ್ವರಿ ಕವಲಗೇರಿ ಅಲಂಕರಿಸಿದರು.
ಇಂದು ಬೆಳಿಗ್ಗೆ ಹತ್ತು ಗಂಟೇಯಿಂದಲೇ ಆರಂಭವಾದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪಕ್ರಿಯೆಯಲ್ಲಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಹಾಗೂ ಬಿಜೆಪಿ ಮುಖಂಡ ಎಂ.ಆರ್.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠರವರ ಸಲಹೆಯಂತೆ ಪ್ರತಿಸ್ಪರ್ಧಿ ಇರದೆ ಎರೆಡು ಸ್ಥಾನ ಅವಿರೋಧವಾಗಿ ಆಯ್ಕೆ ಕಂಡವು ಕೊರೊನಾ ಕಾರಣ ಯಾವುದೇ ಸಂಭ್ರಮಕ್ಕೆ ಮುಂದಾಗದ ಅಧ್ಯಕ್ಷ ಉಪಾಧ್ಯಕ್ಷರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸನ್ಮಾನಕ್ಕೆ ಕೊರಳೊಡ್ಡಿದರು.
ಸದ್ಯ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಹತ್ತು ತಿಂಗಳ ಬಳಿಕ ಪಟ್ಟಣ ಪಂಚಾಯಿತಿ ಸದಸ್ಯರುಗಳು ಇಂದು ಕಮೀಟಿ ರಚಿಸಿದ್ದು ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಕುಂದಗೋಳ ಪಟ್ಟಣದ ಅಭಿವೃದ್ಧಿ ಬಗ್ಗೆ ಜನ ದೃಷ್ಟಿ ನೆಟ್ಟಿದ್ದಾರೆ.
Kshetra Samachara
06/11/2020 05:44 pm