ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ:ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

ಕಲಘಟಗಿ:ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯ ಎಲ್ಲ ಸದಸ್ಯರಿಗೆ‌ ಪಕ್ಷದಿಂದ ವಿಪ್ ಜಾರಿಮಾಡಲಾಗಿದೆ.

ಕಲಘಟಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನವಣೆಗೆ ನವಂಬರ್ 6 ರಂದು ಚುನಾವಣೆ ನಿಗದಿ ‌ಪಡಿಸಲಾಗಿದೆ.ಬಿಜೆಪಿಯ 9 ಹಾಗೂ ಬಿಜೆಪಿ ಸೇರಿದ 3 ಸದಸ್ಯರಿಗೆ ಪಕ್ಷದಿಂದ ವಿಪ್ ಜಾರಿ ಮಾಡಲಾಗಿದೆ.

ಕುದುರೆ ವ್ಯಾಪಾರ ನಡೆಯದಿರಲಿ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ವಿಪ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ.

17 ನೇ ವಾರ್ಡ್ ಸದಸ್ಯೆ ಅನಸೂಯಾ ಹುಬ್ಬಳ್ಳಿಮಠ ಅಧ್ಯಕ್ಷ ಸ್ಥಾನಕ್ಕೆ ಹಾಗೂ 11 ನೇ ವಾರ್ಡ್ ಸದಸ್ಯೆ ಯಲ್ಲವ್ವ ಶಿಗ್ಲಿ ಉಪಾಧ್ಯಕ್ಷ ಸ್ಥಾನದ‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/11/2020 01:57 pm

Cinque Terre

48.03 K

Cinque Terre

0

ಸಂಬಂಧಿತ ಸುದ್ದಿ