ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಬಿಐ ವಿಚಾರಣೆ ರಾಜಕೀಯ ಪ್ರೇರಿತವಾಗಬಾರದು: ಹೊರಟ್ಟಿ

ಹುಬ್ಬಳ್ಳಿ;ಈ ಹಿಂದೆ ಬಿಜೆಪಿಯವರು ಸಿಬಿಐ ಕಾಂಗ್ರೆಸ್ ಕೈಗೊಂಬೆ ಅಂತಿದ್ರು, ಈಗ ಕಾಂಗ್ರೆಸ್ ನವರು ಸಿಬಿಐ ಬಿಜೆಪಿ ಕೈಗೊಂಬೆ ಅಂತಿದ್ದಾರೆ.ಇದು ರಾಜಕೀಯ ಪ್ರೇರಿತವಾಗಬಾರದು ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹೇಳಿದರು.

ಮಾಜಿ‌ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದ ವಿಚಾರದ ಹಿನ್ನೆಲೆಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು,

ಕಾನೂನು ಎಲ್ಲರಿಗು ಒಂದೆ, ಇದರಲ್ಲಿ ರಾಜಕೀಯ ಮಾಡಬಾರದು.ಸಿಬಿಐ ಆಗಲಿ ಯಾರೆ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಕಾನೂನು ಎಲ್ಲರಿಗೂ ಒಂದೇ ಎಂದ ಅವರು,ಇಂತಹ ಸಂಸ್ಥೆಗಳನ್ನು ಅಧಿಕಾರಕ್ಕೆ ಬಂದಾಗ ಪಕ್ಷಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ವಿನಯ್ ಕುಲಕರ್ಣಿ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಇದೆ ಕಾರಣಕ್ಕೆ ಇವತ್ತು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಚರ್ಚೆ ಮಾಡುವಂತಾಗಿದೆ.ಬಿಜೆಪಿ ಹೈಕಮಾಂಡ್ ಬೇಟಿಗೆ ವಿನಯ್ ಕುಲಕರ್ಣಿ ಹೋಗಿದ್ದು ನಿಜ.ಆದರೆ ಯಾರು ಯಾರನ್ನು ಕರೆದಿದ್ದರು ಎನ್ನುವುದು ಗೊತ್ತಿಲ್ಲ. ಇದು‌ ರಾಜಕೀಯ ಒತ್ತಡದಿಂದ ಆಗಿದೆ ಎಂದು ಹೊರಟ್ಟಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

05/11/2020 01:41 pm

Cinque Terre

59.48 K

Cinque Terre

0

ಸಂಬಂಧಿತ ಸುದ್ದಿ