ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣ ಪಂಚಾಯತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯ ಸಂಖ್ಯಾ ಬಲ ಹೊಂದಿರುವ ಬಿಜೆಪಿ

ವರದಿ : ಮಲ್ಲಿಕಾರ್ಜುನ ಪುರದನಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ

ಕಲಘಟಗಿ:ಬಹು ನಿರೀಕ್ಷೆಯ ಕಲಘಟಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು,ಬಿಜೆಪಿ‌ ಸರಳ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ.

17 ಸಂಖ್ಯೆ ಬಲದ ಕಲಘಟಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನವಂಬರ್ 6 ರಂದು ಚುನಾವಣೆ ನಿಗದಿ ‌ಪಡಿಸಲಾಗಿದೆ.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ ಜಾ ಮಹಿಳೆಗೆ ಮೀಸಲಾತಿ‌ ಕಲ್ಪಿಸಲಾಗಿದೆ.ಅಧಿಕಾರ ಪಡೆಯಲು ಒಟ್ಟು 9 ಸ್ಥಾನಗಳ ಸಂಖ್ಯಾ ಬಲ‌ ಅಗತ್ಯವಾಗಿದೆ.

ಬಿಜೆಪಿ 9,ಕಾಂಗ್ರೆಸ್ 3,ಜೆಡಿಎಸ್ 2‌ ಹಾಗೂ ಪಕ್ಷೇತರ 3 ಸ್ಥಾನಗಳನ್ನು ಹೊಂದಿವೆ.ಪಕ್ಷೇತರ ಸದಸ್ಯರು ಈಗಾಗಲೇ ಬಿಜೆಪಿ ಬೆಂಬಲಿಸಿದ್ದಾರೆ.ಎಂ ಎಲ್ ಎ ಹಾಗೂ ಎಂ ಪಿ ತಲಾ ಒಂದು ಮತ ಚಲಾಯಿಸುವ ಅಧಿಕಾರ ಇದ್ದು,ಬಿಜೆಪಿ ಸಂಖ್ಯೆ ಬಲ 14 ಕ್ಕೆ ಹೆಚ್ಚಳವಾಗಿದ್ದು,ಅಧಿಕಾರದ ಗದ್ದುಗೆಯನ್ನು‌ ಬಿಜೆಪಿ ನಿರಾಳವಾಗಿ ತನ್ನದಾಗಿಸಿಕೊಳ್ಳಲಿದೆ.

Edited By : Nagesh Gaonkar
Kshetra Samachara

Kshetra Samachara

05/11/2020 09:58 am

Cinque Terre

37.46 K

Cinque Terre

0

ಸಂಬಂಧಿತ ಸುದ್ದಿ