ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತದೆ; ಮಾಜಿ ಶಾಸಕ ಕೋನರೆಡ್ಡಿ

ಅಣ್ಣಿಗೇರಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಆರ್ಭಟದಿಂದಾಗಿ ತಾಲೂಕಿನ ಗ್ರಾಮಗಳಾದ ಅಣ್ಣಿಗೇರಿ ತಾಲ್ಲೂಕಿನ ನಲವಡಿ, ಮಣಕವಾಡ, ಶಿಶ್ವಿನಹಳ್ಳಿ, ದುಂದೂರ, ಬೆನ್ನೂರ, ಬಲ್ಲರವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ರಾಡಿಹಳ್ಳ, ಬೆಣ್ಣಿಹಳ್ಳ, ಯರನಹಳ್ಳ ಮುಂತಾದ ನಾಲಾ ಹಳ್ಳಗಳಿಂದ ರೈತರು ಬೆಳೆದ ಬೆಳೆಗಳು ಹಾಗೂ ಒಡ್ಡುಗಳು ಒಡೆದು ಹೋಗಿದ್ದು, ಈ ಹಿನ್ನಲೆ ತಾಲೂಕಿನ ಮಾಜಿ ಶಾಸಕರಾದ ಎನ್ ಹೆಚ್ ಕೋನರೆಡ್ಡಿ ಅವರು ನಲವಡಿ ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ಬೆಳೆಹಾನಿ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು ಹುಬ್ಬಳ್ಳಿ-ಗದಗ ರಾಷ್ಟೀಯ ಹೆದ್ದಾರಿ ನಿರ್ಮಾಣವದ ನಂತರ ನೀರು ಹೋಗುವ ಕೆಲ ದಾರಿಗಳು ಮಾಡದೇ ಇರುವುದರಿಂದ ನೀರು ಜಮೀನುಗಳಿಗೆ ನುಗ್ಗಿ ರೈತರ ಬದುವುಗಳು, ಬೆಳೆಗಳು ಕೊಚ್ಚಿಹೋಗಿವೆ. ಕಳೆದ ಮೂರು ತಿಂಗಳಿಂದ ನಲವಡಿ-ಶಿಶ್ವಿನಹಳ್ಳಿ, ಶಿಶ್ವಿನಹಳ್ಳಿ-ಇಂಗಳಹಳ್ಳಿ ರಸ್ತೆ ಸಂಪರ್ಕವೇ ಸ್ಥಗಿತಗೊಂಡಿದೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವವರಿಗೆ ಸಮಸ್ಯೆಯಾಗಿದೆ.

ನಾನು ಶಾಸಕನಿದ್ದ ಅವಧಿಯಲ್ಲಿ ಶಿಶ್ವಿನಹಳ್ಳಿ-ಮಣಕವಾಡ ನಡುವೆ ಇರುವ ರಾಡಿಹಳ್ಳಕ್ಕೆ ಸೇತುವೆ ನಿರ್ಮಿಸಲು 8 ಕೋಟಿ ಹಾಗೂ ಶಿಶ್ವಿನಹಳ್ಳಿ-ಇಂಗಳಹಳ್ಳಿ ನಡುವೆ ಇರುವ ಯರನಹಳ್ಳಕ್ಕೆ ಸೇತುವೆ ನಿರ್ಮಿಸಲು 9 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಿ 4 ವರ್ಷ ಕಳೆದರೂ ಇಲ್ಲಿಯವರೆಗೂ ಕಾಮಗಾರಿ ಮುಗಿಸಿಲ್ಲ ಎಂದರು.

ಇನ್ನೂ ಹಳ್ಳದ ಕಡೆ ಇರುವ ಎಲ್ಲ ಗ್ರಾಮಗಳು ಭಾಗಶಹ ನೀರಲ್ಲಿ ನಿಲ್ಲುವಂತಾಗಿದೆ. ಸರ್ಕಾರ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ಅಧಿಕಾರಿಗಳ ಕೊರತೆ ಇದೆ ಎಂದು ನೆಪ ಹೇಳುತ್ತಾರೆ. ಗ್ರಾಮಲೆಕ್ಕಾಧಿಕಾರಿ, ಪಿಡಿಓ, ಇಂಜಿನೀಯರಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರ ಕೆಲಸಗಳಿಗೆ ಕೊರತೆ ಉಂಟಾಗಿದೆ.

Edited By : Shivu K
Kshetra Samachara

Kshetra Samachara

13/09/2022 02:10 pm

Cinque Terre

17.33 K

Cinque Terre

2

ಸಂಬಂಧಿತ ಸುದ್ದಿ