ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರೈತರು ಬೆಳೆದ ಹೆಸರನ್ನು ಸರ್ಕಾರದ ಖರೀದಿ ಕೇಂದ್ರದಲ್ಲಿ ಸರಿಯಾಗಿ ಖರೀದಿಸುತ್ತಿಲ್ಲ; ಎನ್ ಹೆಚ್ ಕೋನರಡ್ಡಿ

ನವಲಗುಂದ: ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ವಿವಿಧ ತಾಲೂಕುಗಳಲ್ಲಿ ಸರ್ಕಾರ ಹೆಸರು ಕಾಳು ಖರೀದಿ ಕೇಂದ್ರ ತೆರೆದರೂ ಕುಂಟು ನೆಪ ಹೇಳಿ ಅಧಿಕಾರಿಗಳು ರೈತರಿಂದ ಹೆಸರು ಖರೀದಿಸುತ್ತಿಲ್ಲ ಎಂದು ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ದೂರಿದ್ದಾರೆ.

ನವಲಗುಂದದ ಹೆಸರು ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಟಿ.ಎ.ಪಿ.ಎಮ್.ಎಸ್ ವತಿಯಿಂದ 1400 ಜನ ರೈತರು ನೋಂದಾಯಿಸಿದ್ದಾರೆ. ಅದರಲ್ಲಿ ಕೇವಲ 300 ರೈತರಿಂದ ಎಪಿಎಂಸಿಯಲ್ಲಿ ಖರೀಸಿದ್ದಾರೆ ಹಾಗೂ ಬಸವರಾಜ ಹರಿವಾಳದ ಅವರ ಜಿನ್ನಿಂಗ ಫ್ಯಾಕ್ಟರಿಯ ಆವರಣದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ 1,430 ರೈತರು ನೋಂದಾಯಿಸಿದ್ದು, ಕೇವಲ 400 ರೈತರಿಂದ ಮಾತ್ರ ಹೆಸರು ಖರೀದಿಸಿದ್ದಾರೆ. ಈ ಎಲ್ಲ ಸಮಸ್ಯೆಗಳ ಕುರಿತು ರೈತರು ದೂರವಾಣಿ ಮಾಡಿದಾಗ ಸಮಸ್ಯೆ ಆಲಿಸಲು ಖರೀದಿ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಹೆಸರು ಕಾಳು 12% ತೇವಾಂಶ ಬಂದರೆ ಮಾತ್ರ ಖರೀದಿಸುತ್ತೇವೆ ಎಂದು ತಾಂತ್ರಿಕ ಕಾರಣದ ನೆಪವೊಡ್ಡಿ ಇಲ್ಲಿಯವರೆಗೆ ಕೇವಲ 20% ರೈತರಿಂದ ಹೆಸರು

ಖರೀದಿಸಿದ್ದಾರೆ. ಇನ್ನೂ 80% ರೈತರು ಖರೀದಿ ಕೇಂದ್ರಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ತಕ್ಷಣ ಸ್ಪಂಧಿಸಿ ರೈತರಿಂದ ಖರೀದಿ ಮಾಡಲು 15% ತೇವಾಂಶ ಬಂದರೂ ಖರೀದಿಸಬೇಕು. ಪ್ರತಿ ರೈತರಿಂದ ಕನಿಷ್ಠ 15 ಕ್ವಿಂಟಲ್ ಅಥವಾ ರೈತರು ಬೆಳೆದ ಎಲ್ಲ ಹೆಸರು ಬೆಳೆಯನ್ನು ಖರೀದಿಸಬೇಕು. ವಿವಿಧ ಕರಾರುಗಳನ್ನು ಹಾಕಿ ರೈತರರಿಗೆ ತೊಂದರೆಯಾಗಿದೆ. ಮಳೆಗಾಲ ಇರುವುದರಿಂದ ರೈತರು ದಾಸ್ತಾನು ಮಾಡಿಕೊಳ್ಳಲು ಜಾಗೆಯ ಸಮಸ್ಯೆಯಾಗಿದೆ.

ಮಾರುಕಟ್ಟೆಯಲ್ಲಿ ದರ ಕುಸಿದಾಗ ರೈತರು ಬೆಳೆದ ಬೆಲೆಗೆ ಬೆಂಬಲ ಬೆಲೆಯಲ್ಲಿ ಸರ್ಕಾರ ವೇಳೆಗೆ ಸರಿಯಾಗಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಆದರೆ ಸರ್ಕಾರ ರೈತರಿಂದ ಆನ್‌ಲೈನ್ ಮೂಲಕ ಅರ್ಜಿ ನೋಂದಣಿಯಾದರೂ ಹೆಸರು ಕಾಳು ಸರಿಯಾಗಿ ಖರೀದಿಸುತ್ತಿಲ್ಲ ಹಾಗೂ ಎಪಿಎಂಸಿ ಹೊರಗಡೆ ಸಾಕಷ್ಟು ಟ್ರ್ಯಾಕ್ಟರ್‍ಗಳು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಪ್ರತಿ ದಿನ ಸಾಮಾನ್ಯವಾಗಿದೆ ಎಂದು ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು.

Edited By : PublicNext Desk
Kshetra Samachara

Kshetra Samachara

05/10/2021 11:34 am

Cinque Terre

15.85 K

Cinque Terre

0

ಸಂಬಂಧಿತ ಸುದ್ದಿ