ಕುಂದಗೋಳ : ಅತಿವೃಷ್ಟಿಗೆ ಹಾಳಾದ ರೈತ ಬೆಳೆಗಳಿಗೆ ಪರಿಹಾರ, ರೇಷನ್ ಕಾರ್ಡ್ ವಿತರಣೆ, ಬೆಳೆ ವಿಮೆ ತುಂಬಿದ ಅರ್ಹ ರೈತರಿಗೆ ಬೆಳೆ ವಿಮೆ ಬಿಡುಗಡೆ, ಹಾಗೂ ಅತಿವೃಷ್ಟಿ ಪರಿಣಾಮ ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ತಹಶೀಲ್ದಾರ ಕಚೇರಿಯ ಆವರಣದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಅಚ್ಚೇದಿನ್ ಹೆಸರಲ್ಲಿ ರೈತರು ಬಡವರು ಮೇಲೆ ಧೋರಣೆ ಮಾಡುತ್ತಿದೆ, ರೇಷನ್ ಕಾರ್ಡ್ ಇರದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ರೇಷನ್ ಕಾರ್ಡ್ ವಿತರಿಸಿ ಮನೆ ಬಿದ್ದವರಿಗೆ ಪರಿಹಾರ ಹಾಗೂ ಬೆಣ್ಣೆ ಹಳ್ಳದಿಂದ ಕೃಷಿ ಭೂಮಿಯ ಬೆಳೆ ಹಾಳಾದ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Kshetra Samachara
17/09/2021 02:43 pm