ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನು ಬಗ್ಗೆ, ಜಿಲ್ಲೆಯ ಪ್ರತಿಯೊಂದು ಮನೆಯ ರೈತನಿಗೆ ಜಾಗೃತಿ ಮೂಡಿಸು ಅಭಿಯಾನ ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ರೈತ ಸೇನಾ ಅಧ್ಯಕ್ಷ ಶಂಕರ ಅಂಬಲಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪ್ರವಾಹ ಮತ್ತು ಅತೀವವೃಷ್ಟಿಯಿಂದ ರೈತರು ಪರದಾಡುತ್ತಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲಾ. ರೈತರ ಬೆಳೆಹಾನಿ ವಿಮೆ ಇದುವರೆಗೂ ಬಂದಿಲ್ಲ ಆದರಿಂದ ರೈತ ಜಾಗೃತಿ ಅವಶ್ಯಕತೆ ಇದೆ. ಆದ್ದರಿಂದ ಆ. 12ರಂದು ಎಲ್ಲ ಭಾಗದ ರೈತ ಮುಖಂಡರು ಧಾರವಾಡದಲ್ಲಿ ಸಭೆ ಮಾಡಿ, ಸಮಗ್ರವಾಗಿ ಚರ್ಚಿಸಿ ದೇಶದ ರೈತ ಹೋರಾಟಗಳ ಅನಿವಾರ್ಯತೆ ಅದನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
Kshetra Samachara
13/08/2021 01:45 pm