ಧಾರವಾಡ: ಗೋವಾ ವಿಧಾನಸಭೆಯಲ್ಲಿ ನಿನ್ನೆ ಅಲ್ಲಿನ ಮುಖ್ಯಮಂತ್ರಿ, ಕರ್ನಾಟಕದ ಪಾಲಿನ ಮಹಾದಾಯಿ ನೀರನ್ನು ಬಿಟ್ಟು ಕೊಡುವುದಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ಏನೇನೋ ಹೇಳಿಕೆ ನೀಡಬೇಡಿ ಎಂದು ಕರ್ನಾಟಕ ಹಸಿರು ಸೇನೆ ರಾಜ್ಯ ಅಧ್ಯಕ್ಷ ಶಂಕರ ಅಂಬಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಜಲ ವಿವಾದವನ್ನು ಬಾಯಿ ಮಾತಿನ ಮೂಲಕ ಬಗೆಹರಿಸಿಕೊಂಡಿಲ್ಲ. ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ಮೂಲಕ ಈ ವಿವಾದವನ್ನು ಬಗೆಹರಿಸಲಾಗಿದೆ. ಈ ಸಂಬಂಧ ಗೆಜೆಟ್ ನೋಟಿಫಿಕೇಶನ್ ಕೂಡ ಹೊರಡಿಸಲಾಗಿದೆ. ನಮ್ಮ ರಾಜ್ಯ ಸರ್ಕಾರ ಈ ಕಾರ್ಯವನ್ನು ನೆನೆಗುದಿಗೆ ಬಿಡದೇ ಸಾಗರೋಪಾದಿಯಲ್ಲಿ ಮಹಾದಾಯಿ ಯೋಜನೆ ಅನುಷ್ಠಾನ ಕಾರ್ಯ ಕೈಗೆತ್ತಿಕೊಳ್ಳಬೇಕು. ಹೀಗೆ ನೆನೆಗುದಿಗೆ ಬಿಟ್ಟರೆ ಗೋವಾ ವಿನಾಕಾರಣ ಕ್ಯಾತೆ ತೆಗೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.
Kshetra Samachara
30/01/2021 03:28 pm