ಅಣ್ಣಿಗೇರಿ : 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭಾರತಿಯ ಹತ್ತಿ ನಿಗಮದ ವತಿಯಿಂದ ಎಫ್.ಎ.ಕ್ಯೂ ಗುಣಮಟ್ಟದ ಹತ್ತಿ ಖರೀದಿ ಕೇಂದ್ರದ ಉದ್ಘಾಟನೆಯನ್ನು ಎಪಿಎಂಸಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಬಾರಿಯ ಅತಿವೃಷ್ಟಿ ಪರಿಣಾಮ ರೈತರು ಬದುಕು ತತ್ತರಿಸಿದೆ.
ಈ ಕಾರಣ ಸ್ಥಳೀಯ ಶಾಸಕರು ಒತ್ತಾಯ ಹಾಗೂ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ತೆರೆದ ಈ ಹತ್ತಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಿ ಎಂದರು.
ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಮಾತನಾಡಿ ಇಂದಿನಿಂದ ಹತ್ತಿ ಖರೀದಿ ಕೇಂದ್ರ ಅಣ್ಣಿಗೇರಿಯಲ್ಲಿ ಆರಂಭವಾಗಲಿದೆ. ಸೂಕ್ತ ದಾಖಲೆಗಳನ್ನ ನೀಡಿ ಹತ್ತಿ ಮಾರಾಟ ಮಾಡಿರಿ.
ಯಾವುದೇ ಕಾರಣಕ್ಕೂ ದಲ್ಲಾಳಿಗಳ ಮೋಸಕ್ಕೆ ರೈತ ಬಲಿಯಾಗಬಾರದು ಎಂದರು ಅತಿವೃಷ್ಟಿಗೆ ಸಿಲುಕಿದ ರೈತರ ಕಷ್ಟಕ್ಕೆ ಸರ್ಕಾರದ ಸ್ಪಂದಿಸಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರು ಎಪಿಎಂಸಿ ಅಧಿಕಾರಿಗಳು, ಹಾಗೂ ರೈತರು ಉಪಸ್ಥಿತರಿದ್ದರು.
Kshetra Samachara
23/11/2020 04:46 pm