ಹುಬ್ಬಳ್ಳಿ: ಇಲ್ಲಿಯ ರಾಜಗರ ಹಾಗೂ ಪ್ರಮುಖ ಬಡಾವಣಿಗಳಿಗೆ ಸಂಪರ್ಕ ಕಲ್ಪಿಸುವ ದೇಶಪಾಂಡೆ ನಗರ ಕೃಷ್ಣ ಕಲ್ಯಾಣ ಮಂಟಪ ಬಳಿಯ ರೈಲ್ವೆ ಕಾಮಗಾರಿಯನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನಿ ಚೇರ್ಮನ್ ವಿ.ಎಸ್.ವಿ ಪ್ರಸಾದ್ ವೀಕ್ಷಣೆ ಮಾಡಿದರು.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಈ ಸೇತುವೆ ಪೂರ್ಣಗೊಂಡಲ್ಲಿ ದೇಶಪಾಂಡೆ ನಗರದ ಮೂಲಕ ಭವಾನಿ ನಗರದ ಹಾಗೂ ಇನ್ನಿತರ ಬಡಾವಣೆಗಳಿಗೆ ಅತಿ ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ. ಇಷ್ಟೇ ಅಲ್ಲ ರಾಜನಗರದ ಕ್ರೀಡಾಂಗಣದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿ ವೀಕ್ಷಣಗೆ ತೆರಳು ಹೆಚ್ಚು ಅನುಕೂಲವಾಗಲಿದೆ. ಹೌದು.
ಕಾಮಗಾರಿ ವೀಕ್ಷಿಸಿದ ಸಚಿವ ಜಗದೀಶ ಶೆಟ್ಟರ್ ಗುಣಮಟ್ಟದ ನಿರ್ಮಾಣ ಕಾರ್ಯಕೈಗೊಂಡು ಆದಷ್ಟು ಬೇಗ ಕಾಮಗಾರಿ ಪೂರ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಚಿವರು ಹಾಗೂ ಬಿಜೆಪಿ ಯ ಅನೇಕ ಮುಖಂಡರು ಉಪಸ್ಥಿತರಿದ್ದರು. ಸಚಿವರ ವೀಕ್ಷಣೆ ಸಮಯದಲ್ಲಿ ಬಹುತೆಕ ನಿರ್ಮಾಣ ಕಾರ್ಯವನ್ನು ಸ್ಥಗಿಗೊಳಿಸಲಾಗಿತ್ತು. ವೀಕ್ಷಣೆ ಮುಗಿಸಿ ಸಚಿವ ಶೆಟ್ಟರ.ಸ್ವರ್ಣ ಗ್ರೂಪ್ ಆಫ್ ಕಂಪನಿ ಚೇರ್ಮನ್ ವಿ.ಎಸ್.ವಿ ಪ್ರಸಾದ್ ಹಾಗೂ ಇತರ ಗಣ್ಯರು ತೆರಳಿದ ಕೆಲವೇ ಕ್ಷಣಗಳಲ್ಲಿ ರಕ್ಷಣಾ ಗೋಡೆಯ ಅಲ್ಪ ಪ್ರಮಾಣದ ಮಣ್ಣು ಕೆಳಗೆ ಸರಿದಿದ್ದರಿಂದ ಸ್ವಲ್ಪ ಮಟ್ಟಿಗೆ ಗೊಂದಲವುಂಟಾಗಿತ್ತು. ಆದರೆ ಯಾವುದೇ ರೀತಿ ಗಾಬರಿ, ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರು ಹೇಳಿದರು
Kshetra Samachara
02/01/2021 02:10 pm