ಹುಬ್ಬಳ್ಳಿ: ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಮೊದಲ ಭೇಟಿಯಲ್ಲಿಯೇ ಅವಘಡವೊಂದು ಸಂಭವಿಸಿದೆ.
ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ನೂಕುನುಗ್ಗಲು ಆಗಿದ್ದರಿಂದ ಕಾರ್ ಸಂಚರಿಸುವ ವೇಳೆಯಲ್ಲಿ ನಾಲ್ಕೈದು ಕಾರ್ಯಕರ್ತರು ಕೆಳಗೆ ಬಿದ್ದಿದ್ದಾರೆ. ಇದರಿಂದ ಸಂಭವಿಸಬಹುದಾದ ಭಾರೀ ಅಪಘಾತ ತಪ್ಪಿದಂತಾಗಿದೆ.
ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕಾರ್ಯಕರ್ತರು ಸಭೆಗೆ ಸೇರಿದ್ದರು.ಇದೇ ವೇಳೆ ಕಾರಿಗೆ ಮುಗಿಬಿದ್ದ ಕಾರ್ಯಕರ್ತರನ್ನು ಸರಿಸಿಕೊಂಡು ಹೋಗುವ ಸಂದರ್ಭದಲ್ಲಿ ಕಾರ್ಯಕರ್ತರು ಕೆಳಗೆ ಬಿದ್ದಿದ್ದಾರೆ.
Kshetra Samachara
03/10/2020 06:16 pm