ಕಲಘಟಗಿ: ಉಳುವನೇ ಭೂಮಿಯ ಒಡೆಯ ಕಾಯ್ದೆ ಯಿಂದ ರೈತರ ಬೆಳಕಾಗಿದ್ದ,ಇಂದಿರಾ ಗಾಂಧಿ ಅವರ ಕೊಡುಗೆಯನ್ನು ಬಹಳಷ್ಟು ಜನ ಇಂದು ಮರೆತಿದ್ದಾರೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಬೇಸರ ವ್ಯಕ್ತಪಡಿಸಿದರು.
ಅವರು ಪಟ್ಟದಲ್ಲಿ ಹನುಮಾನ ದೇವಸ್ಥಾನದ ಹತ್ತಿರ ಕಾಂಗ್ರೆಸ್ ಪಕ್ಷದ ದಿಂದ ಹಮ್ಮಿಕೊಂಡ"ಕಿಸಾನ್- ಮಜ್ದೂರ್ ಬಚಾವೋ ದಿವಸ್" ಸಂದರ್ಭದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ರೈತರ ಬಳಿ ಉಳುಮೆ ಮಾಡುವ ಕನಿಷ್ಟ ಭೂಮಿ ಇದೇ ಅಂದರೇ ಅದು ಕಾಂಗ್ರೆಸ್ ಪಕ್ಷದ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೂಡುಗೆ ಎಂದರು.
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿ ಮಾಡುತ್ತಿರುವ ರೈತ, ಕಾರ್ಮಿಕ ಹಾಗೂ ಜನವಿರೋಧಿ ಕಾಯ್ದೆಗಳನ್ನು ಖಂಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಕವಿತಾ ರೆಡ್ಡಿ,ಲಿಂಗರಡ್ಡಿ ನಡುವಿನಮನಿ,ಎಸ್ ಆರ್ ಪಾಟೀಲ,ಬಾಬಾಜಾನ ತೇರಗಾಂವ,ದಾವಲಸಾಬ ಗಂಜಿಗಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
02/10/2020 06:15 pm