ಹುಬ್ಬಳ್ಳಿ: ನಕ್ಸಲ್ ಶರಣಾಗತಿಗೆ ಸಿಎಂ ಅವರು ಇಷ್ಟೊಂದು ವೈಭವಿಕರಿಸುವ ಅವಶ್ಯಕತೆ ಇರಲಿಲ್ಲ. ಯಾವುದೇ ಸರಕಾರ ಇದ್ದರೂ ಇದಕ್ಕೊಂದು ಕಾನೂನಾತ್ಮಕ ಪ್ರಕ್ರಿಯೆ ಇದ್ದೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ನಕ್ಸಲ್ ರ ಶರಣಾಗತಿ ವಿಚಾರದಲ್ಲಿ ಪ್ರಚಾರ ಸರಿಯಲ್ಲ. ನಕ್ಸಲ್ ರು ಶರಣಾಗತಿ ಅಗುವ ವೇಳೆ ಅನುಸರಿಸಿದ ಕ್ರಮ ಸರಿಯಲ್ಲ ಎಂದರು.
ಚಿಕ್ಕಮಗಳೂರು ಡಿಸಿ ಮುಂದೆ ಶರಣಾಗತಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳು ತಮ್ಮ ಮುಂದೆ ಶರಣಾಗತಿಗೆ ಮುಂದಾದರು. ಇದು ಎಷ್ಟು ಸರಿ..? ಎಂದು ಪ್ರಶ್ನಿಸಿದರು.
ನಕ್ಸಲ್‌ರ ಶಸ್ತ್ರಾಸ್ತ್ರಗಳನ್ನು ಸಹ ಶರಣಾಗತಿ ಮಾಡಿಲ್ಲ. ಅವು ಎಲ್ಲಿ ಇವೆ ಅಂತಾ ಇದುವರೆಗೆ ತಿಳಿದಿಲ್ಲ ಎಂದು ಜಗದೀಶ್ ಶೆಟ್ಟರ್ ಟೀಕೆ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2025 05:20 pm