ಧಾರವಾಡ: ಜವಾಹರಲಾಲ್ ನೆಹರೂ, ಮಹಾತ್ಮಾ ಗಾಂಧೀಜಿ, ವಲ್ಲಭಬಾಯಿ ಪಟೇಲ್, ರಾಜೀವ ಗಾಂಧಿ ಸೇರಿದಂತೆ ಇನ್ನೂ ಅನೇಕ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಎಲ್ಲ ನಾಯಕರಿದ್ದಾಗಿನ ಕಾಂಗ್ರೆಸ್ ಪಕ್ಷ ಈಗ ಉಳಿದಿಲ್ಲ. ಈಗಿರುವುದು ನಕಲಿ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯನವರೇ ನೀವು ನಕಲಿ ಕಾಂಗ್ರೆಸ್ ಪಕ್ಷದಲ್ಲಿದ್ದೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೂ ಬಿಜೆಪಿಯವರಿಗೂ ಏನು ಸಂಬಂಧ ಎಂದು ಸಿದ್ದರಾಮಯ್ಯನವರು ಪ್ರಶ್ನೆ ಮಾಡುತ್ತಾರೆ. ನೀವು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಎಷ್ಟು ಬಾರಿ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ಎತ್ತಿದ್ದೀರಿ? ಅಥವಾ ಅವರಿಗೆ ಎಷ್ಟು ಬಾರಿ ಗೌರವ ಕೊಡುವ ಕೆಲಸ ಮಾಡಿದ್ದೀರಿ? ಎಂದು ಜೋಶಿ ಪ್ರಶ್ನಿಸಿದರು.
ನೆಹರೂ, ಗಾಂಧಿ, ವಲ್ಲಭಬಾಯಿ ಪಟೇಲ್ ಅವರಂತಹ ಅನೇಕ ನಾಯಕರಿಗೆ ಬಿಜೆಪಿ ಗೌರವ ಕೊಡುವ ಕೆಲಸ ಮಾಡುತ್ತಿದೆ ಎಂದರು.
ಸೋನಿಯಾಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡೋದಿಲ್ಲ ಎಂದು ಭಾಷಣ ಮಾಡುತ್ತಾರೆ. ಅದೇ ಮಾತನ್ನು ಇಲ್ಲಿನ ಕಾಂಗ್ರೆಸ್ ನವರು ಹೇಳುತ್ತಾರೆ. ಈ ಕಾಂಗ್ರೆಸ್ ಪಕ್ಷ ಬಣ್ಣ ಬದಲಿಸುವ ಊಸರವಳ್ಳಿ ಪಕ್ಷ ಎಂದು ಲೇವಡಿ ಮಾಡಿದರು.
ಯುಪಿಎ ಸರ್ಕಾರ ಇದ್ದಾಗ ಅತ್ಯಂತ ಕಡಿಮೆ ಮಟ್ಟದಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಘೋಷಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಸರು, ಕಡಲೆಗೆ ಹೆಚ್ಚಿನ ಬೆಂಬಲ ಬೆಲೆ ಘೋಷಿಸಿ, ಕೇವಲ ಸರ್ಕಾರ ಮಾತ್ರ ಹೆಚ್ಚಿನ ಬೆಲೆಗೆ ರೈತರು ಬೆಳೆದ ಬೆಳೆಯನ್ನು ಖರೀದಿಸುವುದಷ್ಟೇ ಅಲ್ಲದೇ ಮಾರುಕಟ್ಟೆಯಲ್ಲೂ ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗುವಂತೆ ಮಾಡಿದೆ ಎಂದರು.
Kshetra Samachara
01/11/2020 02:39 pm