ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಏಳು ತಿಂಗಳ ನಂತರ ಮತ ಎಣಿಕೆಗೆ ಅಸ್ತು: ಇದು ಯಾವ ಚುನಾವಣೆ ಗೊತ್ತಾ?

ಧಾರವಾಡ: ಕಳೆದ ಮಾರ್ಚ ತಿಂಗಳಲ್ಲಿ ಧಾರವಾಡದ ಪ್ರತಿಷ್ಟಿತ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. ಚುನಾವಣೆಗೂ ಮುನ್ನ ಎರಡು ಬಣಗಳ ನಡುವೆ ಗೊಂದಲ ಉಂಟಾಗಿ ಇದು ಹೈಕೋರ್ಟ ಮೆಟ್ಟಿಲೇರಿತ್ತು. ಚುನಾವಣೆ ನಡೆಸಬಹುದು ಆದರೆ, ಮತ ಎಣಿಕೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಅಂದು ಆದೇಶ ನೀಡಿದ್ದರಿಂದ ಸಂಸ್ಥೆಯ ಆಡಳಿತ ಮಂಡಳಿಗೆ ಮಾರ್ಚ ತಿಂಗಳಲ್ಲಿ ಕೇವಲ ಚುನಾವಣೆ ಮಾತ್ರ ನಡೆಸಲಾಗಿತ್ತು.

ಇದೀಗ ಹೈಕೋರ್ಟ್ ನಿಂದ, ಮತ ಎಣಿಕೆ ನಡೆಸಬಹುದು ಎಂದು ಸ್ಪಷ್ಟ ಆದೇಶ ಬಂದ ಹಿನ್ನೆಲೆಯಲ್ಲಿ ಏಳು ತಿಂಗಳ ನಂತರ ಮತ ಎಣಿಕಾ ಪ್ರಕ್ರಿಯೆ ನಡೆಸಲಾಗುತ್ತಿದೆ.

ಅಂಜುಮನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರ ಸ್ಥಾನಕ್ಕೆ ಈ ಚುನಾವಣೆ ಜರುಗಿತ್ತು.

ಈ ಸಂಬಂಧ ಮತ ಎಣಿಕೆ ಜವಾಬ್ದಾರಿ ವಹಿಸಿರುವ ಪ್ರೊ.ಮಕಾಂದಾರ ವಿವರವಾಗಿ ಹೇಳುತ್ತಾರೆ ಕೇಳಿ.

ಅಂಜುಮನ್ ಸಂಸ್ಥೆಗೆ ನಡೆದಿರುವ ಈ ಚುನಾವಣೆ ಇಮ್ರಾನ್ ಕಳ್ಳಿಮನಿ ಹಾಗೂ ಇಸ್ಮಾಯಿಲ್ ತಮಟಗಾರ ನಡುವಿನ ಚುನಾವಣೆ ಎಂದೇ ಬಿಂಬಿಸಲಾಗಿದೆ. ಈ ಚುನಾವಣೆಯಲ್ಲಿ ತಮಟಗಾರ ತಮ್ಮ ಬಣವನ್ನು ಕಣಕ್ಕಿಳಿಸಿದ್ದಾರೆ. ಸಂಜೆ ಹೊತ್ತಿಗೆ ಅಂಜುಮನ್ ಸಂಸ್ಥೆಯ ಈ ಚುನಾವಣೆಯಲ್ಲಿ ಯಾರ ಬಣ ಮೇಲುಗೈ ಸಾಧಿಸಲಿದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ.

Edited By : Nagesh Gaonkar
Kshetra Samachara

Kshetra Samachara

31/10/2020 02:29 pm

Cinque Terre

33.5 K

Cinque Terre

0

ಸಂಬಂಧಿತ ಸುದ್ದಿ