ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಸ್ ವೈ ಸರ್ಕಾರಕ್ಕೆ ಉಳಿಗಾಲವಿಲ್ಲ ಎನ್ನುವ ಯತ್ನಾಳ್ ಗೆ ಬಿಜೆಪಿಗರ ಕುಮ್ಮಕ್ಕಿದೆ….

ಹುಬ್ಬಳ್ಳಿ : ಬಿಎಸ್ ವೈ ಸರ್ಕಾರ ಇನ್ನು ಬಹಳ ಬಾಳಿಕೆ ಬರಲ್ಲ ಎಂದು ಹೇಳುತ್ತಿರುವ ಯತ್ನಾಳ್ ಗೆ ಹಲವು ಬಿಜೆಪಿಗರ ಸಪೋರ್ಟ್ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ.

ಶಿಸ್ತಿನ ಪಕ್ಷ ಅಂತಾ ಹೇಳಿಕೊಳ್ಳುವ ಬಿಜೆಪಿ ಈವರೆಗೂ ಯತ್ನಾಳ್ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಇದನ್ನು ನೋಡಿದರೆ ಬಹಳಷ್ಟು ಬಿಜೆಪಿ ನಾಯಕರ ಬೆಂಬಲ ಯತ್ನಾಳ್ ಅವರಿಗಿದೆ ಎನ್ನುವುದು ಸ್ಪಷ್ಟ. ಪಕ್ಷದೊಳಗಿನ ಬೆಂಕಿ ಯಾವ ಸಂದರ್ಭದಲ್ಲಾದರೂ ಹೊತ್ತಿ ಉರಿಯಬಹುದು.

ಯಾವುದೇ ಪಕ್ಷದ ಶಾಸಕರು ಮತ್ತೆ ಚುನಾವಣೆಗೆ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ.

ಹೀಗಾಗಿ ಬಿಜೆಪಿ ಸರ್ಕಾರ ಬಿದ್ದರೆ ಏನು ಬೇಕಾದರೂ ಬೆಳವಣಿಗೆ ಆಗಬಹುದು ಎಂದಿದ್ದಾರೆ. ಪರಿಷತ್ ಮತ್ತು ಉಪ ಚುನಾವಣೆ ಫಲಿತಾಂಶದ ನಂತರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/10/2020 10:37 am

Cinque Terre

22.52 K

Cinque Terre

2

ಸಂಬಂಧಿತ ಸುದ್ದಿ