ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಸೋಮಶೇಖರ್ ಉಮರಾಣಿ ಅವರಿಗೆ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅಲ್ಲದೇ ಒಂದೇ ಪಕ್ಷದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ ಆದ್ದರಿಂದ ಜನರು ಬದಲಾವಣೆ ಬಯಸುತ್ತಿದ್ದಾರೆ ಈ ನಿಟ್ಟಿನಲ್ಲಿ ಶಿವಸೇನಾದ ಅಭ್ಯರ್ಥಿ ಸೋಮಶೇಖರ್ ಉಮರಾಣಿ ಗೆಲುವಿನ ವಿಶ್ವಾಸವನ್ನು ಹೊರಹಾಕಿದ್ದಾರೆ.
ಹೌದು...ಈಗಾಗಲೇ ಎಲ್ಲ ಕಡೆಯಲ್ಲಿ ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದು,ಶಿಕ್ಷಕರು ಹಾಗೂ ಪದವೀಧರ ಮತದಾರರು ಭರವಸೆ ನೀಡಿದ್ದು,ಈ ಭಾರಿ ಅತ್ಯಂತ ಮಹತ್ವದ ಗೆಲುವಿನ ಮೂಲಕ ಉಮರಾಣಿ ಅವರು ಅಭಿವೃದ್ಧಿ ಕಾರ್ಯಕ್ಕಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುವಂತ ಮಾತನ್ನು ಉಮರಾಣಿ ಅವರು ಹಂಚಿಕೊಂಡಿದ್ದಾರೆ.
ಇನ್ನೂ ಹಾವೇರಿ,ಗದಗ,ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಪದವೀಧರ ಮತದಾರರ ಮನಮುಟ್ಟುವಂತೆ ಪ್ರಚಾರ ನಡೆಸಿದ ಉಮರಾಣಿಯವರ ಬೆಂಬಲಕ್ಕೆ ನಿಲ್ಲುವಂತೆ ಮತದಾರರು ಭರವಸೆ ನೀಡಿದ್ದಾರೆ.
Kshetra Samachara
27/10/2020 05:06 pm