ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಮತಪೆಟ್ಟಿಗೆಯೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿಗಳು

ಹುಬ್ಬಳ್ಳಿ: ನಾಳೆ ಅಕ್ಟೋಬರ್‌ 28 ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲಿನಿಂದ ಸಿಬ್ಬಂದಿಗಳು ಮತಗಟ್ಟೆಗೆ ತೆರಳಿದರು.

ಧಾರವಾಡ ,ಗದಗ,ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಯಲ್ಲಿ - 21549 , ಗದಗ- 15978 ,ಹಾವೇರಿ -23593 ಹಾಗೂ ಉತ್ತರ ಕನ್ನಡ 13148 ಜನ ಮತದಾರರು ಸೇರಿ ಒಟ್ಟು ಕ್ಷೇತ್ರದಲ್ಲಿ 74268 ಮತದಾರರು ಇದ್ದಾರೆ. ಧಾರವಾಡ ಜಿಲ್ಲೆಯ 54 ಮತಗಟ್ಟೆಗಳಲ್ಲಿ ಅಕ್ಟೋಬರ್‌ 28 ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಈಗಾಗಲೇ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು,ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಮತಗಟ್ಟೆಗೆ ಪ್ರಯಾಣ ಬೆಳೆಸಿದರು.

Edited By : Nagesh Gaonkar
Kshetra Samachara

Kshetra Samachara

27/10/2020 02:43 pm

Cinque Terre

14.98 K

Cinque Terre

1

ಸಂಬಂಧಿತ ಸುದ್ದಿ