ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗುರಿಕಾರಗೆ ನಾವು ಯಾವುದೇ ಕಂಡೀಶನ್ ಹಾಕಿಲ್ಲ: ಹೊರಟ್ಟಿ

ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರಿಗೆ ನಾವು ಯಾವುದೇ ಕಂಡೀಶನ್ ಹಾಕಿ ಬೆಂಬಲ ಸೂಚಿಸಿಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ ಅಭ್ಯರ್ಥಿ ನೋಡಿ ಮತದಾರರು ಮತ ನೀಡುತ್ತಾರೆ. ಗುರಿಕಾರ ಅವರು ಶಿಕ್ಷಕರಾಗಿದ್ದಂತವರು ಸಾಕಷ್ಟು ಹೋರಾಟಗಳ ಮೂಲಕ ಗುರುತಿಸಿಕೊಂಡವರು. ಬಿಜೆಪಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ನಮ್ಮ ಪಕ್ಷದ ಅಭ್ಯರ್ಥಿಯನ್ನು ಬಿಟ್ಟು ಗುರಿಕಾರ ಅವರಿಗೆ ಬೇಷರತ್ತಾಗಿ ಬೆಂಬಲ ನೀಡಿದ್ದೇವೆ ಎಂದರು.

ಗುರಿಕಾರ ಅವರು ಚುನಾಯಿತರಾದರೆ ಶಿಕ್ಷಕರ ಹೋರಾಟಕ್ಕೆ ಮುಂದಿನ‌ ದಿನಗಳಲ್ಲಿ ಅನುಕೂಲ ಆಗುತ್ತದೆ. ನಾವು ಬೆಂಬಲ ನೀಡಿರುವ ವ್ಯಕ್ತಿ ಆ ಸ್ಥಾನಕ್ಕೆ ಸೂಕ್ತವಾಗಿದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

26/10/2020 05:19 pm

Cinque Terre

37.85 K

Cinque Terre

1

ಸಂಬಂಧಿತ ಸುದ್ದಿ